ADVERTISEMENT

ದೇಶ ವಿರೋಧಿ ಚಟುವಟಿಕೆ ತಡೆಗಟ್ಟಲು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 11:07 IST
Last Updated 11 ಸೆಪ್ಟೆಂಬರ್ 2013, 11:07 IST

ಚಿಕ್ಕಮಗಳೂರು: ಅಹಿಂಸೆ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ವಿರೋ­ಧಿ­ಸಬೇಕು ಎಂದು ಉಜಿರೆಯ ಮಲ್‌­ಜಲ್ ಸಂಸ್ಥೆಯ ಅಧ್ಯಕ್ಷ ಅಲ್ ಹಾದೀ ತಂಙಳ್ ತಿಳಿಸಿದರು.

ಶಾಂತಿ ನಗರದ ಕಲ್ಲುದೊಡ್ಡಿಯಲ್ಲಿ  ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಹಮ್ಮಿಕೊಂಡಿದ್ದ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಬಡ ವಿದ್ಯಾರ್ಥಿ­ಗಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದರು.

ಸೇವೆಯನ್ನು ಮುಖ್ಯ ಗುರಿಯಾಗಿಸಿ­ಕೊಂಡಾಗ ಮಾತ್ರ ಸಂಘಟನೆಯಲ್ಲಿ ಸಾರ್ಥಕತೆ ಕಾಣಬಹುದಾಗಿದೆ. ಅನೇಕ ವಿದ್ಯಾರ್ಥಿಗಳು ಪ್ರತಿಭಾನ್ವಿತ­ರಾಗಿ­ದ್ದರೂ ಆರ್ಥಿಕವಾಗಿ ಹಿಂದುಳಿ­ದಿದ್ದ­ರಿಂದ ಶಿಕ್ಷಣದಿಂದ ವಂಚಿತ­ರಾಗು­ತ್ತಿದ್ದಾರೆ. ಅಂತಹವರನ್ನು ಗುರುತಿಸಿ ನೆರವು ನೀಡಬೇಕಾಗಿದೆ ಎಂದು ಅವರು ಹೇಳಿ­ದರು.

ಜಿಲ್ಲಾ ನಿರ್ದೇಶಕ ಎಪಿಎಸ್ ಅಟ್ಟಕ್ಕೋಯ ತಂಙಳ್, ಶಾಖಾ ಅಧ್ಯಕ್ಷ ಹನೀಫ್ ಮಿಸ್ಟಾಹಿ ಅಧ್ಯಕ್ಷತೆ ವಹಿಸಿ­ದ್ದರು.
ಮಸೀದಿ ಖತೀಬರಾದ ಹಾರಿಸ್ ಸಖಾಫಿ, ತ್ವಾಹಾ ಸಅದಿ, ಅಬ್ದುಲ್ ರಜಾಕ್ ಮದನಿ, ಯಹ್ಯಾ ಸಖಾಫಿ, ಅಬ್ಬಾಸ್ ಲತೀಫಿ, ಎಸ್‌ವೈಎಫ್ ಅಧ್ಯಕ್ಷ ಎ.ಯೂಸಫ್ ಹಾಜಿ, ಕೆ.ಬಿ.ಅಬೂಬಕರ್, ಅಬ್ದುಲ್ಲಾ ಹಾಜಿ, ಅಬ್ಬಾಸ್, ಮುನೀರ್ ಅಹಮದ್ ರಫೀಕ್ ಸಖಾಫಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.