ಆಲ್ದೂರು: ದೊಡ್ಡಮಾಗರವಳ್ಳಿ ಗ್ರಾ.ಪಂ. ವ್ಯಾಪ್ತಿಯ ಬನ್ನೂರಿನಲ್ಲಿ ನಿರ್ಮಿಸುತ್ತಿರುವ ವೀರಭದ್ರೇಶ್ವರ ಮುಕ್ತಿಧಾಮದ ಸಿಲಿಕಾನ್ ಚೇಂಬರ್ ಅಳವಡಿಕೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ₹1.50 ಲಕ್ಷ ಅನುದಾನ ಒದಗಿಸಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮತ್ತು ಮೂಡಿಗೆರೆ ತಾಲ್ಲೂಕು ಯೋಜನಾಧಿಕಾರಿ ಶಿವಾನಂದ ಪಿಲಾರ್ ಅವರು, ಮುಕ್ತಿದಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ಕೆ.ಲಿಂಗೇಗೌಡ ಮತ್ತು ಕಾರ್ಯದರ್ಶಿ ನಾಗೇಶ್ ಅವರಿಗೆ ಅನುದಾನದ ಚೆಕ್ ಅನ್ನು ಹಸ್ತಾಂತರಿಸಿದರು.
ಪಂಚಾಯಿತಿ ಸದಸ್ಯರಾದ ಕೆ.ಎಲ್.ರಾಜು, ಶೌರ್ಯ ಘಟಕದ ಪ್ರತಿನಿಧಿ ಕೆ.ಎಲ್.ಕುಮಾರ್, ಅನಿಲ್ ಕುಮಾರ್, ನವೀನ್, ಮುದ್ದು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.