ADVERTISEMENT

ಉಗ್ರಾಣದಲ್ಲಿ ಪಡಿತರ ಅಕ್ಕಿ ಕನ್ನ ಯತ್ನ: ವ್ಯವಸ್ಥಾಪಕ ಸಹಿತ ನಾಲ್ವರು ವಶ

​ಪ್ರಜಾವಾಣಿ ವಾರ್ತೆ
Published 16 ಮೇ 2020, 16:49 IST
Last Updated 16 ಮೇ 2020, 16:49 IST

ಚಿಕ್ಕಮಗಳೂರು: ತಾಲ್ಲೂಕಿನ ತೇಗೂರು ಬಳಿ ಗೌತಹಳ್ಳಿ ಸಮೀಪದ ಕರ್ನಾಟಕ ಆಹಾರ ಪೂರೈಕೆ ನಿಗಮದ ಉಗ್ರಾಣದಿಂದ ಪಡಿತರ ಅಕ್ಕಿಯನ್ನು ಕದ್ದು ಸಾಗಿಸುವ ಯತ್ನಕ್ಕೆ ಸಂಬಂಧಿಸಿದಂತೆ ಉಗ್ರಾಣದ ವ್ಯವಸ್ಥಾಪಕ, ಮೂವರು ವರ್ತಕರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಪಡಿತರ ಅಕ್ಕಿಯನ್ನು ಕದ್ದು ಸಾಗಿಸುವ ಸಂಚಿನ ಕುರಿತ ಮಾಹಿತಿ ಮೇರೆಗೆ ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಕಾರ್ಯಾಚರಣೆ ನಡೆಸಿದ್ದಾರೆ.

ಉಗ್ರಾಣದಲ್ಲಿ ಚೀಲದಲ್ಲಿದ್ದ ಅಕ್ಕಿಯನ್ನು ಬೇರೆ ಚೀಲಗಳಿಗೆ ತುಂಬಿಸುತ್ತಿರುವುದು ಪತ್ತೆಯಾಗಿದೆ. ಕನ್ನದ ಯತ್ನದ ಗೊತ್ತಾಗಿದೆ.

ADVERTISEMENT

‘242 ಚೀಲ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಉಗ್ರಾಣದ ವ್ಯವಸ್ಥಾಪಕ, ಇತರ ಮೂವರು ವರ್ತಕರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಾಂತರ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.