ಗಡಿಗೇಶ್ವರ (ಎನ್.ಆರ್.ಪುರ): ತಾಲ್ಲೂಕಿನ ಗಡಿಗೇಶ್ವರ ರೈತ ಉತ್ಪಾದಕರ ಸಹಕಾರ ಸಂಘ, ಕೃಷಿ ಇಲಾಖೆ, ಎಸ್.ಎಂ. ಸೆಹಗಲ್ ಫೌಂಡೇಷನ್ ವತಿಯಿಂದ ರೈತರಿಗೆ ಕೃಷಿ ಬಗ್ಗೆ ಶನಿವಾರ ಮಾಹಿತಿ ಕಾರ್ಯಕ್ರಮ ನಡೆಯಿತು.
ಮಣ್ಣಿನ ಪರೀಕ್ಷೆ ಮಾಡಿಸಿದ ಆಯ್ದ ರೈತರಿಗೆ ಉಚಿತ ಪಿಒಪಿ ಕಿಟ್ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಕೆ.ವಿ.ದಿವಾಕರ್, ಉಪಾಧ್ಯಕ್ಷ ಎಂ.ಯೋಗೇಂದ್ರ, ಮೂಡಿಗೆರೆ ಕೆವಿಕೆಯ ವಿಜ್ಞಾನಿ ಎಂ.ಎಚ್.ಸುಚಿತ್ರಾ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್, ಭಾಸ್ಕರ್ ಸೆಹಗಲ್ ಫೌಂಡೇಶನ್‌ನ ಸುಮಂತ್, ಸಿಇಒ ಮನು ಚರಣ್, ಶಿವಾನಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.