ಶೃಂಗೇರಿ: `ನಾಡಿನ ಧೀಮಂತ ನಾಯಕರ ಹೆಸರಿನಲ್ಲಿ ರಸ್ತೆ ಮತ್ತು ವೃತ್ತಗಳನ್ನು ನಿರ್ಮಿಸುವುದು ಅವರ ನೆನಪನ್ನು ಶಾಶ್ವತಗೊಳಿಸುವುದಲ್ಲದೇ ಅವರು ಸಮಾಜಕ್ಕಾಗಿ ಮಾಡಿದ ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸಲು ಮತ್ತು ಗೌರವ ಸಲ್ಲಿಸುವ ಮಾರ್ಗ' ಎಂದು ಆದಿಚುಂಚನಗಿರಿ ಮಠದ ಗುಣನಾಥ ಸ್ವಾಮೀಜಿ ಹೇಳಿದರು.
ಶೃಂಗೇರಿಯ ಭಾರತೀಬೀದಿ ಮತ್ತು ಕುರುಬಕೇರಿ ರಸ್ತೆಯ ತಿರುವಿಗೆ ಪಟ್ಟಣ ಪಂಚಾಯಿತಿಯಿಂದ ಮಾಜಿ ಸಚಿವ ಮಲೆನಾಡಿನ ಬೇಗಾನೆ ರಾಮಯ್ಯ ವೃತ್ತ ಎಂಬ ನಾಮಕರಣದ ಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ವೃತ್ತಗಳಿಗೆ ಸಾಧನೆ ಮಾಡಿದವರ ಹೆಸರು ನಾಮಕರಣ ಮಾಡುವುದರಿಂದ ಸ್ಥಳೀಯರಲ್ಲಿ ಸಮುದಾಯದ ಗುರುತು ಮತ್ತು ಹೆಮ್ಮೆ ಹೆಚ್ಚಿಸುತ್ತದೆ. ತಮ್ಮ ಊರಿನಿಂದ ಬಂದ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿರುವ ರಸ್ತೆಗಳು ಆ ಸಮುದಾಯದ ಪರಂಪರೆಯನ್ನು ಎತ್ತಿ ಹಿಡಿಯುತ್ತವೆ. ಒಟ್ಟಾರೆ ಈ ಸ್ಮಾರಕಗಳು ಕೇವಲ ಭೌತಿಕ ಗುರುತುಗಳಾಗಿರದೇ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಮತ್ತು ಪ್ರಜ್ಞೆಯನ್ನು ಉತ್ತೇಜಿಸುವ ಪ್ರಬಲ ಸಾಧನವಾಗಿದೆ ಎಂದರು.
ಬೇಗಾನೆ ರಾಮಯ್ಯ ಅವರ ಪುತ್ರಿ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಮಾತನಾಡಿ,‘ನಮ್ಮ ತಂದೆ ಸಮಾಜಕ್ಕೆ ನೀಡಿದ ಸೇವೆಯನ್ನು ಹೇಗೆ ಗುರುತಿಸುತ್ತಾರೆಂದರೆ ಅವರ ಹೆಸರನ್ನು ರಸ್ತೆಗಳ ಮೂಲಕ, ವೃತ್ತಗಳನ್ನು ಸ್ಥಾಪಿಸುವ ಮೂಲಕ ಅವರ ಹೆಸರನ್ನು ನಾಮಕರಣ ಮಾಡಿದ್ದರಿಂದ ಮುಂದಿನ ಜನಾಂಗಕ್ಕೆ ಚಿರಸ್ಥಾಯಿಯಾಗಿ ಉಳಿದಿದೆ. ಅವರು ಬದುಕಿದ್ದರೆ ತುಂಬಾ ಖಷಿಪಡುತ್ತಿದ್ದರು' ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವೇಣುಗೋಪಾಲ್, ಸದಸ್ಯರಾದ ಎಂ.ಎಲ್. ಪ್ರಕಾಶ್, ಬಿ.ಅರುಣ, ಆಶಾ, ರಫೀಕ್ ಅಹಮದ್, ರಾಧಿಕಾ, ಶ್ರೀವಿದ್ಯಾ, ಹರೀಶ್ ಶೆಟ್ಟಿ, ಸೌಮ್ಯ ವಿಜಯ್‍ಕುಮಾರ್, ದಿನೇಶ್ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಕೋಸ್, ಕೆ.ಎನ್ ಗೋಪಾಲ್ ಹೆಗ್ಡೆ, ಕೆ.ಸಿ ವೆಂಕಟೇಶ್, ಜಗದೀಶ್ ಹೆಗ್ಡೆ, ಬೇಗಾನೆ ಕೌಶಿಕ್, ರಮೇಶ್, ಸಾತ್ವಿಕ್, ಪ್ರಕಾಶ್ ಉಪಸ್ಥಿತದ್ದರು.
ಹಾಗಾಗಿ ಬೇಗಾನೆ ರಾಮಯ್ಯ ಅವರ ಹೆಸರಿನ ರಸ್ತೆಯನ್ನು ವಿಸ್ತರಣೆ ಮಾಡಬೇಕು. ಅದನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಎಂದು ಆದಿಚುಂಚನಗಿರಿ ಮಠದ ಗುಣನಾಥ ಸ್ವಾಮೀಜಿ ಆರತಿಕೃಷ್ಣರವರಿಗೆ ಹೇಳಿದರು.
ಪಟ್ಟಣದಲ್ಲಿ ರಸ್ತೆಗೆ ಬೇಗಾನೆ ರಾಮಯ್ಯ ವೃತ್ತ ಎಂದು ನಾಮಕರಣ ಮಾಡಿರುವುದರಿಂದ ಸಮಾಜದಲ್ಲಿ ಪ್ರಜ್ಞೆ ಮೂಡುತ್ತದೆ. ಈ ಸ್ಮಾರಕಗಳು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ. ಅವರು ಸ್ಥಾಪಿಸಿದ ನ್ಯಾಯ ಸಮಾನತೆಯಂತಹ ತತ್ವಗಳನ್ನು ಪ್ರತಿದಿನವೂ ನೆನಪಿಸುತ್ತವೆ–ಗುಣನಾಥ, ಸ್ವಾಮೀಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.