ಬೀರೂರು: ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬ ಮೊಹರಂ ಆಚರಣೆಗೆ ಬೀರೂರು ಪಟ್ಟಣದಲ್ಲಿ ಗುರುವಾರ ರಾತ್ರಿ ಚಾಲನೆ ನೀಡಲಾಯಿತು.
ಸಂಪ್ರದಾಯದಂತೆ ಹಬ್ಬ ಆಚರಿಸುವವರು ತಾವು ಪೂಜಿಸುವ ಪಂಜಾಗಳನ್ನು ಮೆರವಣಿಗೆಯಲ್ಲಿ ತಂದು ಬಿ.ಎಚ್.ರಸ್ತೆಯ ಢಾಲ್ ಸಿದ್ದೀಕ್ ಮಕಾನ್, ಅಜ್ಜಂಪುರ ರಸ್ತೆಯ ಬಾರಾ ಮಕಾನ್, ಅಂಜುಮನ್ ಮೊಹಲ್ಲಾದ ಚಾಂದ್‌ಪೀರ್ ಮಕಾನ್‌ಗಳಲ್ಲಿ ಸ್ಥಾಪಿಸಿದರು.
ಬೀರೂರು ಹಳೇಪೇಟೆಯಲ್ಲಿರುವ ಮರಾಠಾ ಸಮುದಾಯದ ಹಲವರಲ್ಲಿ ಮೊಹರಂ ಆಚರಣೆ ರೂಢಿಯಲ್ಲಿದ್ದು, ಅವರು ಪಂಜಾಗಳನ್ನು ಮಹಾನವಮಿ ಬಯಲಿನ ಸಮೀಪದ ಧೋಂಡಿ ಮಕಾನ್‌ನಲ್ಲಿ ಸ್ಥಾಪಿಸಿದರು.
ಮಕಾನ್‌ಗಳ ಮುಂದೆ ದೊಡ್ಡ ಗುಂಡಿಗಳನ್ನು ತೆಗೆದು ಸೌದೆ ಉರಿ ಹಾಕಿದ್ದು, ಶನಿವಾರ ರಾತ್ರಿ ಉಪವಾಸವಿದ್ದು ಕೆಂಡ ಹಾಯುವ ಆಚರಣೆ ನಡೆಯಲಿದೆ.
ಭಾನುವಾರ ಬೆಳಿಗ್ಗೆ ಪಂಜಾಗಳಿಗೆ ಚೋಂಗೆ (ಗೋಧಿಯ ಸಿಹಿತಿಂಡಿ) ನೈವೇದ್ಯ ಅರ್ಪಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು, ಎಲ್ಲ ಮಕಾನ್‌ಗಳ ಭೇಟಿ ಸಮಯದಲ್ಲಿ ಕಾಬಾ ಪ್ರತಿಕೃತಿಯ ತಾಬೂತ್‌ಗಳ ಮೆರವಣಿಗೆಯೂ ನಡೆಯುವುದು. ರಾತ್ರಿ ಸಕ್ಕರೆ ಓದಿಸುವುದು, ತಾಬೂತ್‌ಗಳ ವಿಸರ್ಜನೆಯೊಂದಿಗೆ ಮೊಹರಂ ಆಚರಣೆಗೆ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.