ADVERTISEMENT

ಚಿಕ್ಕಮಗಳೂರು: ಇಂದಿನಿಂದ 8ರವರೆಗೆ ದತ್ತ ಜಯಂತಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 21:51 IST
Last Updated 5 ಡಿಸೆಂಬರ್ 2022, 21:51 IST
   

ಚಿಕ್ಕಮಗಳೂರು: ಇದೇ 6ರಿಂದ 8ರವರೆಗೆ ದತ್ತ ಜಯಂತಿ ಜರುಗಲಿದೆ. ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಕೇಸರಿ ಹಾರ ಕಟ್ಟಿ ಅಲಂಕರಿಸಲಾಗಿದೆ. 6ರಂದು ಅನಸೂಯಾ ಜಯಂತಿ, 7ರಂದು ಶೋಭಾಯಾತ್ರೆ ಹಾಗೂ 8ರಂದು ದತ್ತ ಜಯಂತಿ, ಪಾದುಕೆ ದರ್ಶನ ನಡೆಯಲಿದೆ.

ಬಂದೋಬಸ್ತ್‌ಗೆ ಒಬ್ಬರು ಎಸ್ಪಿ, ನಾಲ್ವರು ಎಎಸ್ಪಿ, 17 ಡಿಎಸ್ಪಿ ಸಹಿತ ಒಟ್ಟು 3050 ಪೊಲೀಸರನ್ನು ನಿಯೋಜಿ
ಸಲಾಗಿದೆ. ಈ ಬಾರಿ ಶ್ರೀಗುರುದತ್ತಾತ್ರೇಯ
ಬಾಬಾ ಬುಡನ್‌ಸ್ವಾಮಿ ದರ್ಗಾ/ಸಂಸ್ಥೆಯಲ್ಲಿ ಪೂಜೆ ನೇರವೇರಿಸಲು ತಾತ್ಕಾಲಿಕವಾಗಿ ಇಬ್ಬರು ಅರ್ಚಕರ ನೇಮಕವಾಗಿದೆ.

ಗಿರಿಶ್ರೇಣಿಯ ತಾಣಗಳಿಗೆ ಪ್ರವಾಸಿಗರಿಗೆ ಇದೇ 9ರಂದು ಬೆಳಿಗ್ಗೆ 10 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.
ಈಗಾಗಲೇ ಹೋಂ ಸ್ಟೆ, ರೆಸಾರ್ಟ್‌ಗಳಲ್ಲಿ ವಾಸ್ತವ್ಯಕ್ಕೆ
ಬುಕ್ಕಿಂಗ್‌ ಮಾಡಿರುವ ಪ್ರವಾಸಿಗರಿಗೆ ನಿರ್ಬಂಧ ಅನ್ವಯಿಸಲ್ಲ ಎಂದು ಜಿಲ್ಲಾಧಿಕಾರಿ ರಮೇಶ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.