ADVERTISEMENT

ಡಿಸಿಸಿ ಬ್ಯಾಂಕ್‌ ಚುನಾವಣೆ: 3 ನಾಮಪತ್ರ ವಾಪಸ್‌

ಒಬ್ಬರು ಅವಿರೋಧ ಆಯ್ಕೆ; 12 ಸ್ಥಾನಕ್ಕೆ 22 ಮಂದಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 4:12 IST
Last Updated 24 ಸೆಪ್ಟೆಂಬರ್ 2020, 4:12 IST
ಚಿಕ್ಕಮಗಳೂರಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌
ಚಿಕ್ಕಮಗಳೂರಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌   

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದವರಲ್ಲಿ ಮೂವರು ವಾಪಸ್‌ ಪಡೆದಿದ್ದಾರೆ. ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಡೂರು ತಾಲ್ಲೂಕು ಪ್ರಾಥಮಿಕ ಸಹಕಾರ ಸಂಘ (ಪ್ಯಾಕ್ಸ್‌) ಪರವಾಗಿ ಸಲ್ಲಿಸಿದ್ದ ಕೆ.ಸಿ.ಗಂಗಾಧರ, ಕೊಪ್ಪ ಪ್ಯಾಕ್ಸ್‌ ಪರವಾಗಿ ಸಲ್ಲಿಸಿದ್ದ ಡಿ.ಬಿ.ರಾಜೇಂದ್ರ ಹಾಗೂ ಜಿಲ್ಲೆಯ ಹಾಲು ಉತ್ಪಾದಕ ಸಂಘಗಳ ಪರವಾಗಿ ಸಲ್ಲಿಸಿದ್ದ ಟಿ.ಕೆ.ಜಗದೀಶ್‌ ಅವರು ನಾಮಪತ್ರ ಹಿಂಪಡೆದಿದ್ದಾರೆ.

ಎನ್‌.ಆರ್‌.ಪುರ ತಾಲ್ಲೂಕು ಪ್ಯಾಕ್ಸ್‌ ಪರವಾಗಿ ಎಚ್‌.ವಿ.ಸಂದೀಪ್‌ ಕುಮಾರ್‌ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆ ಘೋಷಿಸಲಾಗಿದೆ.

ADVERTISEMENT

12 ನಿರ್ದೇಶಕ ಸ್ಥಾನಗಳಿಗೆ ‌ಅಂತಿಮವಾಗಿ 22 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಸ್ಪರ್ಧಿಸಿರುವ ಸ್ಥಾನ, ಅಭ್ಯರ್ಥಿಗಳು, ಚಿಹ್ನೆ ವಿವರ ಇಂತಿದೆ.

ಚಿಕ್ಕಮಗಳೂರು ತಾಲ್ಲೂಕು ಪ್ಯಾಕ್ಸ್‌ ಪರವಾಗಿ ಎರಡು ಸ್ಥಾನಗಳಿಗೆ ನಾಲ್ವರು ಸ್ಪರ್ಧಿಸಿದ್ದಾರೆ.

ಎಂ.ಎಸ್‌. ನಿರಂಜನ– ಟ್ರಾಕ್ಟರ್‌ ಓಡಿಸುತ್ತಿರುವ ರೈತ, ಎಸ್‌.ಎಲ್‌।. ಭೋಜೇಗೌಡ– ಹವಾ ನಿಯಂತ್ರಕ, ಟಿ.ಇ. ಮಂಜುನಾಥ– ಹಣ್ಣಿನ ಬುಟ್ಟಿ, ಎಚ್‌.ಬಿ. ಸತೀಶ್‌– ಆಟೊ ರಿಕ್ಷಾ ಚಿಹ್ನೆ ನೀಡಲಾಗಿದೆ.

ತರೀಕೆರೆ ತಾಲ್ಲೂಕು ಪ್ಯಾಕ್ಸ್‌ ಪರವಾಗಿ ಎರಡು ಸ್ಥಾನಗಳಿಗೆ ನಾಲ್ವರು ಕಣದಲ್ಲಿ ಇದ್ದಾರೆ.

ಕೆ.ಆರ್‌.ಆನಂದಪ್ಪ– ಗ್ಯಾಸ್‌ ಸಿಲಿಂಡರ್‌, ಎಚ್‌.ಎಂ.ಓಂಕಾರಸ್ವಾಮಿ– ವಜ್ರ, ಬಿ.ಬಿ. ರವಿಕುಮಾರ– ಆಟೊ ರಿಕ್ಷಾ, ಡಿ.ಎಸ್. ಸುರೇಶ್‌– ತೆಂಗಿನ ತೋಟ ಚಿಹ್ನೆ ನೀಡಲಾಗಿದೆ.

ಕಡೂರು ಪ್ಯಾಕ್ಸ್‌ ಪರವಾಗಿ ಎರಡು ಸ್ಥಾನಗಳಿಗೆ ಮೂವರು ಕಣದಲ್ಲಿ ಇದ್ದಾರೆ. ಎಸ್‌.ವಿ.ಬಸವರಾಜಪ್ಪ– ತೆಂಗಿನ ತೋಟ, ಬೆಳ್ಳಿ ಪ್ರಕಾಶ್‌– ಆಟೋ ರಿಕ್ಷಾ, ಎಸ್‌.ಜಿ. ರಾಮಪ್ಪ –ವಜ್ರ ಚಿಹ್ನೆ ನೀಡಲಾಗಿದೆ.

ಮೂಡಿಗೆರೆ ತಾಲ್ಲೂಕು ಪ್ಯಾಕ್ಸ್‌ ಪರವಾಗಿ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದಾರೆ.

ಎಚ್‌.ಬಿ.ಶಿವಣ್ಣ– ಹಣ್ಣುಗಳಿರುವ ಬಾಸ್ಕೆಟ್‌, ಬಿ.ಎಲ್‌.ಸಂದೀಪ್‌– ಟಿಲ್ಲರ್‌ ಚಿಹ್ನೆ ನೀಡಲಾಗಿದೆ.

ಕೊಪ್ಪ ತಾಲ್ಲೂಕು ಪ್ಯಾಕ್ಸ್‌ ಪರವಾಗಿ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದಾರೆ.

ಕೆ.ಎಸ್‌. ರವೀಂದ್ರ– ಟಯರ್‌, ಎಸ್‌.ಎನ್‌. ರಾಮಸ್ವಾಮಿ– ಆಟೊ ರಿಕ್ಷಾ ಚಿಹ್ನೆ ನೀಡಲಾಗಿದೆ.

ಶೃಂಗೇರಿ ತಾಲ್ಲೂಕು ಪ್ಯಾಕ್ಸ್‌ ಪರವಾಗಿ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದಾರೆ.

ಕೆ.ಎಂ. ರಮೇಶ್‌– ಬ್ಯಾಟರಿ ಟಾರ್ಚ್‌, ಡಿ.ಸಿ. ಶಂಕರಪ್ಪ– ತೆಂಗಿನ ತೋಟ ಚಿಹ್ನೆ ನೀಡಲಾಗಿದೆ.

ಜಿಲ್ಲೆಯ ಹಾಲು ಉತ್ಪಾದಕ ಸಹಕಾರ ಸಂಘಗಳ ಪರವಾಗಿ ಎರಡು ಸ್ಥಾನಗಳಿಗೆ ಮೂವರು ಕಣದಲ್ಲಿ ಇದ್ದಾರೆ.

ಎಸ್‌.ಎಲ್‌.ಧರ್ಮೇಗೌಡ– ಆಟೊ ರಿಕ್ಷಾ, ಎಂ. ಪರಮೇಶ್ವರಪ್ಪ– ಹವಾ ನಿಯಂತ್ರಕ, ಟಿ. ಸುರೇಶ್‌– ಬ್ರೀಫ್‌ ಕೇಸ್‌ ಚಿಹ್ನೆ ನೀಡಲಾಗಿದೆ.

ಜಿಲ್ಲೆಯ ಇತರ ಸಹಕಾರ ಸಂಘಗಳ ಪರವಾಗಿ ಒಂದು ಸ್ಥಾನಕ್ಕೆ ಇಬ್ಬರು ಕಣದಲ್ಲಿ ಇದ್ದಾರೆ.

ಬಿ.ಆರ್. ನಾರಾಯಣ– ವಜ್ರ, ಟಿ.ಎಲ್‌.ರಮೇಶ್‌– ಆಟೊ ರಿಕ್ಷಾ ಚಿಹ್ನೆ ನೀಡಲಾಗಿದೆ.

‘ಕೋರ್ಟ್‌ ಆದೇಶ; ಸ್ಪರ್ಧೆಗೆ ಅವಕಾಶ’

ಮತದಾರರ ಪಟ್ಟಿಯಲ್ಲಿ (ಕಡೂರು ತಾಲ್ಲೂಕು ಸೋಮನಹಳ್ಳಿ ಪ್ಯಾಕ್ಸ್‌ ಸದಸ್ಯ) ಹೆಸರು ಕೈಬಿಟ್ಟಿರುವ ಬಗ್ಗೆ ಎಸ್‌.ವಿ. ಬಸವರಾಜಪ್ಪ ಹೈಕೋರ್ಟ್‌ ಮೆಟ್ಟಿಲು ಏರಿದ್ದರು. ಚುನವಾಣೆಯಲ್ಲಿ ಸ್ಪರ್ಧಿಸಲು, ಮತದಾನ ಮಾಡಲು ಅವಕಾಶ ಕೋರಿದ್ದರು.

ಕೋರ್ಟ್‌ ಆದೇಶದಂತೆ ಬಸವರಾಜಪ್ಪ ಅವರಿಗೆ ಸ್ಪರ್ಧಿಸಲು, ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.