ಬಾಳೆಹೊನ್ನೂರು: ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ್ಕೆಮನೆ ಸರ್ವೆ ಸಂ. 334ರ 25 ಹೆಕ್ಟೇರ್ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟಿರುವ ಅರಣ್ಯ ಇಲಾಖೆಯು ಬೇಲಿ ನಿರ್ಮಿಸಲು ಕಾಡು ಕಡಿದು ನಾಶ ಮಾಡಿದೆ ಎಂದು ಗ್ರಾಮಸ್ಥರು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬಸವನಕೋಟೆ ಮೀಸಲು ಅರಣ್ಯಕ್ಕೆ ಸೇರಿದ ಈ ಪ್ರದೇಶದಲ್ಲಿ ಇಲಾಖೆಯು ದಾಖಲೆಯಲ್ಲಿ ತೋರಿಸಿದಷ್ಟು ಗಿಡಗಳನ್ನು ನೆಟ್ಟಿಲ್ಲ. ಕಾಡಿನೊಳಗೆ ಜೆಸಿಬಿ ಬಳಸಿ ಗುಂಡಿಗಳನ್ನು ತೆಗೆಯಲಾಗಿದೆ. ನೆಟ್ಟ ಗಿಡಗಳ ರಕ್ಷಣೆಗಾಗಿ ಇಲಾಖೆ ದೊಡ್ಡ ದೊಡ್ಡ ಗಾತ್ರದ ಮರಗಳನ್ನು ಕಡಿದು ಬೇಲಿಗೆ ಬಳಸಿದೆ. ಅರಣ್ಯದಲ್ಲಿ ಮರಗಳಿಗೂ ಮೊಳೆ ಹೊಡೆದು ವಿರೂಪಗೊಳಿಸಲಾಗಿದೆ.
ಇಲಾಖೆಯೇ ಕಾಡು ನಾಶ ಮಾಡಲು ಮುಂದಾಗಿದ್ದು ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.