ಕೊಪ್ಪ ತಾಲ್ಲೂಕು ಗಬ್ಬಾನೆಯಲ್ಲಿ ರಥೋತ್ಸವ ನಡೆಯಿತು
ಕೊಪ್ಪ: ತಾಲ್ಲೂಕಿನ ಗಬ್ಬಾನೆ ಪಂಚಲಿಂಗೇಶ್ವರ ಸ್ವಾಮಿ, ಅರ್ಧನಾರೀಶ್ವರಿ ಅಮ್ಮನವರ ಹಾಗೂ ಭೂತರಾಯ ದೇವಸ್ಥಾನದಲ್ಲಿ ಶನಿವಾರ ಸಂಭ್ರಮದ ರಥೋತ್ಸವ ನಡೆಯಿತು.
ಬೆಳಿಗ್ಗೆ ವಿಶೇಷ ಪೂಜೆ, ಭಕ್ತರು ದೇವರಿಗೆ ಹಣ್ಣು ಕಾಯಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದವಸ–ಧಾನ್ಯಗಳನ್ನು ರಥಕ್ಕೆ ಎರಚಿ, ರಥವನ್ನು ಎಳೆದರು. ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿ ರಥೋತ್ಸವ ನಂತರ ದುಗುಳೋತ್ಸವ ಆಯೋಜಿಸಲಾಗಿತ್ತು.
ಭಾನುವಾರ (ಏ.13) ಕುಂಕುಮೋತ್ಸವ, ಅವಭೃತ ಸ್ನಾನ, ರಾತ್ರಿ ಮಹೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.