ADVERTISEMENT

ಕಡೂರು: ಲಯನ್ಸ್ ಕ್ಲಬ್ ಅರಿವಿನ ಮನೆಗೆ ಈಶ್ವರಪ್ಪ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:42 IST
Last Updated 26 ಜುಲೈ 2025, 6:42 IST
ಕಡೂರು ಲಯನ್ಸ್ ಕ್ಲಬ್ ಅರಿವಿನ ಮನೆಯ ಅಧ್ಯಕ್ಷರಾಗಿ ಲಯನ್ಸ್ ಕೆ.ಎಸ್.ಈಶ್ವರಪ್ಪ ಮತ್ತು ಪದಾಧಿಕಾರಿಗಳು ಗುರುವಾರ ಪದಗ್ರಹಣ ಮಾಡಿದರು
ಕಡೂರು ಲಯನ್ಸ್ ಕ್ಲಬ್ ಅರಿವಿನ ಮನೆಯ ಅಧ್ಯಕ್ಷರಾಗಿ ಲಯನ್ಸ್ ಕೆ.ಎಸ್.ಈಶ್ವರಪ್ಪ ಮತ್ತು ಪದಾಧಿಕಾರಿಗಳು ಗುರುವಾರ ಪದಗ್ರಹಣ ಮಾಡಿದರು   

ಕಡೂರು: ಇಲ್ಲಿನ ಲಯನ್ಸ್ ಕ್ಲಬ್ ಅರಿವಿನ ಮನೆಯ ಅಧ್ಯಕ್ಷರಾಗಿ ಲಯನ್ಸ್ ಈಶ್ವರಪ್ಪ ಕೆ.ಎಸ್. ಗುರುವಾರ ಆಯ್ಕೆಯಾದರು.

ಅರಿವಿನ ಮನೆ ರೈತ ಸಭಾಂಗಣದಲ್ಲಿ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ಕಾರ್ಯದರ್ಶಿಯಾಗಿ ಲಯನ್ ರವಿಕುಮಾರ್, ಖಜಾಂಚಿಯಾಗಿ ಶಶಿಧರ್ ಹಾಗೂ ಸೇವಾ ಅಧ್ಯಕ್ಷರಾಗಿ ರಂಗನಾಥಸ್ವಾಮಿ ಅಧಿಕಾರ ಸ್ವೀಕರಿಸಿದರು. ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಡಿಯ ಜಾಗತಿಕ ಕಾರಣಗಳ ಸಂಯೋಜನಾಧಿಕಾರಿ ವೆಂಕಟೇಶ್ ಹೆಬ್ಬಾರ್‌ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಪ್ರಾಂತ್ಯ-14ರ ಅಧ್ಯಕ್ಷ ಲಯನ್ ವೆಂಕಟೇಶ್ ಬಿ.ಎನ್ ಮತ್ತು ವಲಯ-3ರ ಅಧ್ಯಕ್ಷರಾದ ಲಯನ್ ಸತೀಶ್ ಸಾಹುಕಾರ್, ಪ್ರತಿಭಾ ಹೆಬ್ಬಾರ್, ಗೋಪಿಕೃಷ್ಣ, ಕುಮಾರ್, ಸುರೇಶ್, ಈಶ್ವರಪ್ಪ, ಗಿರೀಶಾರಾಧ್ಯ, ಕಲ್ಲಪ್ಪ, ಕಲ್ಲೇಶ್, ಮಂಜು, ವೈ.ಎಚ್‌. ನೀಲಕಂಠಪ್ಪ ಮತ್ತು ಮಲ್ಲಪ್ಪ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.