ADVERTISEMENT

ಕಡೂರು: ಜಿಲೆಟಿನ್ ವಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 15:25 IST
Last Updated 10 ಏಪ್ರಿಲ್ 2025, 15:25 IST
ಕಡೂರು ಪೊಲೀಸರು ವಶಪಡಿಸಿಕೊಂಡ ಜಿಲೆಟಿನ್ ಮತ್ತಿತರ ಸ್ಫೋಟಕ ವಸ್ತುಗಳು
ಕಡೂರು ಪೊಲೀಸರು ವಶಪಡಿಸಿಕೊಂಡ ಜಿಲೆಟಿನ್ ಮತ್ತಿತರ ಸ್ಫೋಟಕ ವಸ್ತುಗಳು   

ಕಡೂರು: ಅನುಮತಿಯಿಲ್ಲದೆ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಮತ್ತು ಸ್ಫೋಟಕ್ಕೆ ಬಳಸುವ ಬತ್ತಿಯನ್ನು ಕಡೂರು ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪಟ್ಟಣದ ಕಲ್ಗುಂಡಿ ನಿವಾಸಿ ನಾಗರಾಜ್ ಎಂಬುವರ ಮನೆಯನ್ನು ಶೋಧಿಸಿದಾಗ ₹6,774 ಮೌಲ್ಯದ 389 ಜಿಲೆಟಿನ್ ಕಡ್ಡಿಗಳು ಮತ್ತು 250 ಅಡಿ ಸ್ಫೋಟಕದಲ್ಲಿ ಬಳಸುವ ಬತ್ತಿ ಪತ್ತೆಯಾಗಿದ್ದು, ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಪವನ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT