ಕೊಪ್ಪದಲ್ಲಿ ಬಂಟರ ಭವನ ಲೋಕಾರ್ಪಣೆ ಸಮಾರಂಭ ಜರುಗಿತು
ಕೊಪ್ಪ: ಪಟ್ಟಣ ಸಮೀಪದ ಅನನ್ಯ ವಿಜಯನಗರದಲ್ಲಿ ನಿರ್ಮಾಣಗೊಂಡ ಬಂಟರ ಭವನ ಲೋಕಾರ್ಪಣೆ ಸಮಾರಂಭ ಈಚೆಗೆ ಜರುಗಿತು.
ತಾಲ್ಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಟಿ.ಡಿ.ರಾಜೇಗೌಡ ಅವರು, ಭವನಕ್ಕೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ಉದ್ಘಾಟಿಸಿದರು. ಬೆಂಗಳೂರಿನ ಎಂ.ಆರ್.ಜಿ.ಗ್ರೂಫ್ ಆಡಳಿತ ನಿರ್ದೇಶಕ ಕೆ.ಪ್ರಕಾಶ್ ಶೆಟ್ಟಿ ಅವರು, ನೂತನ ಭವನ ಉದ್ಘಾಟಿಸಿದರು.
ಬಂಟರ ಯಾನೆ ನಾಡವರ ಸಂಘದ ಮಹಾಪೋಷಕಿ ಗೀತಾ ವಿಜಯ ಅಜಿಲ ಅವರು ‘ಆಶಾ ಪ್ರಕಾಶ್ ಶೆಟ್ಟಿ ಮಹಾದ್ವಾರ’ ಉದ್ಘಾಟಿಸಿದರು. ಹೇರಂಭಾ ಇಂಡಸ್ಟ್ರೀಸ್ ಸಂಸ್ಥಾಪಕ ಸದಾಶಿವ ಶೆಟ್ಟಿ, ಎಫ್.ಕೆ.ಸಿ.ಸಿ.ಐ ಮಾಜಿ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಚಿವ ಡಿ.ಎನ್.ಜೀವರಾಜ್, ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.