ಮೂಡಿಗೆರೆ: ಮೀನುಗಾರಿಕೆ ಇಲಾಖೆ ವತಿಯಿಂದ ಮತ್ಸ್ಯ ವಾಹಿನಿ ಯೋಜನೆಯಡಿ ‘ಮತ್ಸ್ಯವಾಹಿನಿ’ ಕ್ಯಾಂಟೀನ್‌ಗೆ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.
ಕೆ.ಎಂ. ರಸ್ತೆಯ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನ ಮುಂಭಾಗದಲ್ಲಿ ಸ್ಥಾಪಿತವಾದ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಸ್ಗಲ್ ಗ್ರಾ.ಪಂ. ಮಾಜಿ ಸದಸ್ಯ ಹೆಸ್ಗಲ್ ಗಿರೀಶ್ ಮಾತನಾಡಿ, ‘ಮೀನುಗಾರಿಕೆ ಇಲಾಖೆಯು ಮತ್ಸ್ಯ ವಾಹಿನಿ ಯೋಜನೆಯಡಿ ಕ್ಯಾಂಟೀನ್ ಸ್ಥಾಪಿಸಿರುವುದು ಉತ್ತಮ ಕಾರ್ಯವಾಗಿದೆ. ಇದರಿಂದ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮೀನಿನ ಖಾದ್ಯಗಳು ದೊರೆಯಲು ಸಹಾಯಕವಾಗಿದೆ’ ಎಂದರು.
ಹಸಿರು ಫೌಂಡೇಷನ್ ಸಂಸ್ಥಾಪಕ ರತನ್ ಊರುಬಗೆ ಮಾತನಾಡಿದರು. ಗಣೇಶ್, ದೇವರಾಜ್ ಹೆಸ್ಗಲ್, ಕುಮಾರ್, ಅಭಿಜಿತ್ ಹೆಡದಾಳ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.