ADVERTISEMENT

ಮೂಡಿಗೆರೆ: ಶೇ 80.74 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 2 ಮೇ 2025, 16:02 IST
Last Updated 2 ಮೇ 2025, 16:02 IST

ಮೂಡಿಗೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂಡಿಗೆರೆ ಹಾಗೂ ಕಳಸ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 1,283 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,036 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ತಾಲ್ಲೂಕಿಗೆ ಶೇ 80.74 ರಷ್ಟು ಫಲಿತಾಂಶ ಲಭಿಸಿದೆ.

ಮೂಡಿಗೆರೆ ಪಟ್ಟಣದ ಬೆಥನಿ ಶಾಲೆಯ ಕೆ.ಎಸ್. ಅಪೇಕ್ಷಾ ಹಾಗೂ ರಚನಾ ಸುಧನ್  621 ಅಂಕ ಗಳಿಸಿದ್ದಾರೆ. ಇದೇ ಶಾಲೆಯ ಕೆ.ಸಿ. ಹಿಂದೂಶ್ರೀ (618), ಕಳಸದ ಜೆಎಎಸ್ ಶಾಲೆ ವಿದ್ಯಾರ್ಥಿ ಧನ್ಯ ಜಿ. ಗೌಡ (616), ಶ್ರೇಯಾ ಆರ್. ಪೂಜಾರಿ (615), ಕಳಸದ ಕೆಪಿಎಸ್ ಶಾಲೆಯ ಕೆ.ಎಸ್. ಅಶ್ವಿತಾ (615), ಕಳಸದ ಜೆಇಎಂ ಶಾಲೆಯ ಪಿ. ದಿಗಂತ್ (613), ಕಳಸ ಪ್ರಬೋಧಿನಿ ಶಾಲೆಯ ಯಶ್ವಂತ್ (613), ಬಣಕಲ್ ವಿದ್ಯಾಭಾರತಿ ಶಾಲೆಯ ಬಿ.ಎಸ್. ಸಾನಿಧ್ಯ (613) ಚಿನ್ನಿಗ ಎಲೈಟ್ ಮೈಂಡ್ ಇಂಟರ್ ನ್ಯಾಷನಲ್ ಶಾಲೆಯ ಹಿಂದೂಶ್ರೀ (613) ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT