ಚಿಕ್ಕಮಗಳೂರು: ಮಲೆನಾಡಿನಲ್ಲಿ ನಾಲ್ಕೈದು ದಿನ ಅಬ್ಬರಿಸಿದ್ದ ಮಳೆ ಶುಕ್ರವಾರ ಕೊಂಚ ಕಡಿಮೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಮುಂದುವರಿದಿದ್ದು, ವಾಹನ ಚಾಲನೆಗೆ ಸವಾರರು ಶುಕ್ರವಾರವೂ ತೊಂದರೆ ಅನುಭವಿಸಿದರು.
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಬಿಡುವಿನ ನೀಡಿ ಆಗಾಗ ಮಳೆ ಸುರಿಯಿತು. ಮಳೆಯ ನಡುವೆ ಮಂಜು ಆವರಿಸಿತ್ತು. ಉಳಿದೆಡೆ ಬಿಡುವಿನ ನಡುವೆ ಆಗೊಮ್ಮೆ ಈಗೊಮ್ಮೆ ಮಳೆಯ ಸಿಂಚನವಾಯಿತು.
ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿತ್ತು. ಬಿಡುವು ನೀಡಿ ಸೂರ್ಯನ ದರ್ಶನವಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಚುರುಕು ಪಡೆಯಲಿದೆ. ಕಾಫಿತೋಟದ ಕೆಲಸಗಳು ಆರಂಭವಾಗಲಿವೆ ಎಂದು ಬೆಳೆಗಾರರು ಹೇಳುತ್ತಾರೆ.
ಮಳೆ ವಿವರ(ಸೆಂಟಿ ಮೀಟರ್‌ಗಳಲ್ಲಿ ಗುರುವಾರ ಬೆಳಿಗ್ಗೆ 8.30ರಿಂದ ಶುಕ್ರವಾರ ಬೆಳಿಗ್ಗೆ 8.30ರ ತನಕ)
ತಾಲ್ಲೂಕು; ವಾಡಿಕೆ ಮಳೆ; ಸುರಿದ ಮಳೆ
ಚಿಕ್ಕಮಗಳೂರು; 0.2; 0.8
ಕಡೂರು; 0.2; 0.1
ಕೊಪ್ಪ; 2.5; 5.5
ಮೂಡಿಗೆರೆ; 2.7; 3.2
ಎನ್.ಆರ್.ಪುರ; 1.4; 1.6
ಶೃಂಗೇರಿ; 4.0; 6.4
ತರೀಕೆರೆ; 0.5; 0.5
ಅಜ್ಜಂಪುರ; 0.2; 0.1
ಕಳಸ; 3.0; 5.8
ಜಿಲ್ಲೆಯ ಸರಾಸರಿ; 1.5; 1.9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.