ನರಸಿಂಹರಾಜಪುರದಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಮಳೆ ಸುರಿದಾಗ ವಾಹನದ ಬೆಳಕಿನಲ್ಲಿ ಕಂಡು ಬಂದ ಮಳೆಯ ದೃಶ್ಯ
ನರಸಿಂಹರಾಜಪುರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಸಾಧಾರಣದಿಂದ ಮಳೆ ಸುರಿಯಿತು.
ಶನಿವಾರ ಸಂಜೆ 6ರ ನಂತರ ಮೋಡಕವಿದ ವಾತಾವರಣ ಉಂಟಾಯಿತು. ಸಂಜೆ 7ರ ಬಳಿಕ ಗುಡುಗು ಸಹಿತ ಮಳೆ ಪ್ರಾರಂಭವಾಯಿತು. ಕಳೆದೆರೆಡು ದಿನಗಳಿಂದ ಮೋಡಕವಿದ ವಾತಾವರಣವುಂಟಾಗಿದ್ದು, ಮಳೆ ಬಂದಿರಲಿಲ್ಲ.
ಹದವಾದ ಮಳೆ ಸುರಿದಿದ್ದರಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆಯಿತು. ಗುಡುಗು ಹಾಗೂ ತುಂತುರು ಮಳೆ ರಾತ್ರಿ 8ರ ನಂತರವೂ ಮುಂದುವರೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.