ADVERTISEMENT

ಶೃಂಗೇರಿ: ಧಾರಾಕಾರ ಮಳೆ, ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 15:30 IST
Last Updated 14 ಏಪ್ರಿಲ್ 2025, 15:30 IST
ಪಟ್ಟಣದ ಕುರುಬಕೇರಿಯಲ್ಲಿ ಬೃಹದಾಖರದ ಹಲಸಿನ ಮರದ ಕೊಂಬೆ ಚಿಕನ್ ಅಂಗಡಿಯ ಮೇಲೆ ಬಿದ್ದು ಹಾನಿಯಾಗಿರುವುದು 
ಪಟ್ಟಣದ ಕುರುಬಕೇರಿಯಲ್ಲಿ ಬೃಹದಾಖರದ ಹಲಸಿನ ಮರದ ಕೊಂಬೆ ಚಿಕನ್ ಅಂಗಡಿಯ ಮೇಲೆ ಬಿದ್ದು ಹಾನಿಯಾಗಿರುವುದು    

ಶೃಂಗೇರಿ: ತಾಲ್ಲೂಕಿನ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಸೋಮವಾರ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ.

ರಭಸದ ಗಾಳಿಯಿಂದ ಹಲವು ಕಡೆ ಅಡಿಕೆ, ತೆಂಗಿನ ಮರಗಳು ನೆಲಕ್ಕೆ ಉರುಳಿದೆ. ಮನೆಯ ಮೇಲೆ ಮರಗಳು ಬಿದ್ದು, ಮನೆಗಳಿಗೆ ಹಾನಿ ಸಂಭವಿಸಿದೆ.

15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಕೆಲವು ಕಡೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು, ತಂತಿ  ತುಂಡಾಗಿದೆ. ಕೊಚ್ಚವಳ್ಳಿ, ಗುಂಡ್ರೇ, ಹಾಲಂದೂರು, ಹೊನ್ನವಳ್ಳಿ, ಮಸಿಗೆ, ಹುಲಗಾರು ಸಮೀಪ ಮರಗಳು ಬಿದ್ದಿವೆ. ಕಚಿಗೆಯಲ್ಲಿ  33 ಕೆ.ವಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.