ತರೀಕೆರೆ : ಪಟ್ಟಣದ ಅರುಣೋದಯ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. 12 ವರ್ಷಗಳಿಂದ ಸತತವಾಗಿ ಶಾಲೆಗೆ ಶೇ100 ಫಲಿತಾಂಶ ದಾಖಲಿಸುತ್ತಿದ್ದು, ಇದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಹೆಚ್. ಶ್ರೀಹರ್ಷ ಹೇಳಿದರು.
ಸುಧೀಕ್ಷಾ ಸಿ. 623 ಅಂಕಗಳನ್ನು ಗಳಿಸಿದ್ದು, ರಾಜ್ಯಮಟ್ಟದಲ್ಲಿ ಮೂರನೆಯ ರ್‍ಯಾಂಕ್ ಪಡೆದಿದ್ದಾರೆ. ಸುಜಯ್ ಜಿ. ವರ್ಣೇಕರ್ 619, ಮತ್ತು ಪ್ರಮೋದ್ ಟಿ.ಜಿ. ವರ್ಣೇಕರ್ 618 ಅಂಕ ಪಡೆದಿದ್ದಾರೆ.
ಪಟ್ಟಣದ ನಿವಾಸಿ ಚಿದಾನಂದ ಮತ್ತು ಸುಷ್ಮಾ ಅವರು, ಮಗಳ ಸಾಧನೆಗೆ ಸಂತೋಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.