ADVERTISEMENT

ನರಸಿಂಹರಾಜಪುರ: ತೆಪ್ಪೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 6:14 IST
Last Updated 7 ಅಕ್ಟೋಬರ್ 2022, 6:14 IST
ಶರನ್ನವರಾತ್ರಿ ಉತ್ಸವದ ಅಂಗವಾಗಿ ತೆಪ್ಪೋತ್ಸವ ನಡೆಯಿತು
ಶರನ್ನವರಾತ್ರಿ ಉತ್ಸವದ ಅಂಗವಾಗಿ ತೆಪ್ಪೋತ್ಸವ ನಡೆಯಿತು   

ನರಸಿಂಹರಾಜಪುರ: ಇಲ್ಲಿನ ಶರನ್ನವ
ರಾತ್ರಿ ಸೇವಾ ಸಮಿತಿ ಆಶ್ರಯದಲ್ಲಿ ಬುಧವಾರ ಮೆಣಸೂರಿನ ಭದ್ರಾ ಹಿನ್ನೀರಿ
ನಲ್ಲಿ ಆಯೋಜಿಸಿದ್ದ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾ
ಡಿದ ಶಾಸಕ ಟಿ.ಡಿ.ರಾಜೇಗೌಡ, ‘ಶರನ್ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ದೇವಿ ಶಿಷ್ಟರನ್ನು ರಕ್ಷಿಸಲಿ. ಎಲ್ಲರಿಗೂ ಒಳ್ಳೆಯ ಬುದ್ಧಿಯನ್ನು ಕೊಡುವ ಮೂಲಕ ಸಮಾಜಕ್ಕೆ ಒಳಿತು ಮಾಡಲಿ’ ಎಂದರು.

ಜೆಡಿಎಸ್ ಪ್ರಮುಖ ಸುಧಾಕರ್ ಎಸ್. ಶೆಟ್ಟಿ ಮಾತನಾಡಿ, ದುರ್ಗಾ ಮಾತೆ ಎಲ್ಲರಿಗೂ ಒಳಿತು ಕರುಣಿಸಲಿ ಎಂದರು.

ADVERTISEMENT

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಅರುಣ್ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಶರನ್ನವರಾತ್ರಿ ಸೇವಾ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್, ಗುತ್ತ್ಯಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ, ಎಚ್.ಎನ್.ರವಿಶಂಕರ್, ಶರನ್ನವರಾತ್ರಿ ಸೇವಾ ಸಮಿತಿಯ ಸಂತೋಷ್ ಕುಮಾರ್, ಸುನಿಲ್ ಕುಮಾರ್, ಕಮ್ತಿ ವಾಸಪ್ಪ ಗೌಡ, ಎನ್.ಆರ್. ನಾಗರಾಜ್, ಎನ್.ಎಂ.ಕಾಂತರಾಜ್ ಇದ್ದರು.

ಅಭಿನವ ಮ್ಯೂಸಿಕಲ್ ವತಿಯಿಂದ ರಸಮಂಜರಿ ಆಯೋಜಿಸಲಾಗಿತ್ತು. ಭದ್ರಾ ಹಿನ್ನೀರಿನಲ್ಲಿ ಸಿಡಿಮದ್ದಿನ ಪ‍್ರದರ್ಶನ ಏರ್ಪಡಿಸಲಾಗಿತ್ತು. ತೆಪ್ಪದ ಮೂಲಕ ಕೊಂಡೊಯ್ದು ದೇವಿಯನ್ನು ವಿಸರ್ಜನೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.