ಸಾವು
(ಪ್ರಾತಿನಿಧಿಕ ಚಿತ್ರ)
ಬಾಳೆಹೊನ್ನೂರು(ಚಿಕ್ಕಮಗಳೂರು): ಗಾಳಿ–ಮಳೆಗೆ ಬಾಳೆಹೊನ್ನೂರು ಸಮೀಪ ಮರದ ಕೊಂಬೆಯೊಂದು ಬಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.
ಕಡಬಗೆರೆ ಬಿಳುಕೊಪ್ಪ ನಿವಾಸಿ ಅನಿಲ್ ರುಜಾರಿಯೊ(50) ಮೃತಪಟ್ಟವರು. ಇವರು ತಮ್ಮ ಗ್ರಾಮದಿಂದ ಬಾಳೆಹೊನ್ನೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಬಾಳೆಹೊನ್ನೂರು–ಚಿಕ್ಕಮಗಳೂರು ರಸ್ತೆಯ ಎಲೆಕ್ಲಲು ಬಳಿ ಮರದ ಕೊಂಬೆಯೊಂದು ಮುರಿದು ಅವರ ಮೇಲೆ ಬಿದ್ದಿದೆ.
ತಲೆಗೆ ತೀವ್ರವಾಗಿ ಪೆಟ್ಟಾಗಿದ್ದ ಅವರನ್ನು ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಅವರ ಮೃತಪಟ್ಟಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.