ADVERTISEMENT

ಚಿಕ್ಕಮಗಳೂರು: ಪರಿಸರವಾದಿ ಡಿ.ವಿ.ಗಿರೀಶ್‌ಗೆ ಥಳಿತ; ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 10:59 IST
Last Updated 31 ಆಗಸ್ಟ್ 2021, 10:59 IST
ವೈಲ್ಡ್‌ ಕ್ಯಾಟ್‌– ‘ಸಿ’ ಸಂಚಾಲಕ, ಪರಿಸರವಾದಿ ಡಿ.ವಿ. ಗಿರೀಶ್‌ ಅವರ ಮೇಲೆ ಕೆಲ ಯುವಕರಿಂದ ಹಲ್ಲೆ
ವೈಲ್ಡ್‌ ಕ್ಯಾಟ್‌– ‘ಸಿ’ ಸಂಚಾಲಕ, ಪರಿಸರವಾದಿ ಡಿ.ವಿ. ಗಿರೀಶ್‌ ಅವರ ಮೇಲೆ ಕೆಲ ಯುವಕರಿಂದ ಹಲ್ಲೆ    

ಚಿಕ್ಕಮಗಳೂರು: ವೈಲ್ಡ್‌ ಕ್ಯಾಟ್‌– ‘ಸಿ’ ಸಂಚಾಲಕ, ಪರಿಸರವಾದಿ ಡಿ.ವಿ. ಗಿರೀಶ್‌ ಅವರ ಮೇಲೆ ಕೆಲ ಯುವಕರು ಹಲ್ಲೆ ನಡೆಸಿರುವ ವಿಡಿಯೊ ವೈರಲ್‌ ಆಗಿದೆ.

ಯವಕರಿಬ್ಬರು ಗಿರೀಶ್‌ ಅವರ ಕಪಾಳಕ್ಕೆ ಥಳಿಸುವ, ಜೀಪಿನಿಂದ ಇಳಿದ ಇನ್ನೊಬ್ಬರು ಕಪಾಳಕ್ಕೆ ಹೊಡೆಯುವ ದೃಶ್ಯಗಳು ಮತ್ತು ಬೈಯ್ಯುವ ಧ್ವನಿ ವಿಡಿಯೊದಲ್ಲಿವೆ.

‘ಗಿರೀಶ್‌, ಸ್ನೇಹಿತನ ಪುತ್ರಿ, ಇತರರು ಜೀಪಿನಲ್ಲಿ ಸಂತವೇರಿ ಸಮೀಪ ಸಾಗುವಾಗ ರಸ್ತೆ ಬದಿಯಲ್ಲಿದ್ದ ಕೆಲ ಯುವಕರು ಚುಡಾಯಿಸಿದರು. ಅದನ್ನು ಪ್ರಶ್ನಿಸಿದ್ದಕ್ಕೆ ಯುವಕರು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಕಂಬಿಹಳ್ಳಿ ಬಳಿ ಜೀಪ್‌ ಅಡ್ಡಗಟ್ಟಿ ಥಳಿಸಿದರು ಎಂದು ಜೀಪಿನಲ್ಲಿದ್ದವರು ಹೇಳಿದ್ದಾರೆ’ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಡಿ.ವಿ.ಗಿರೀಶ್‌ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಂಬಿಹಳ್ಳಿ, ಹೊಸಪೇಟೆಯ ಎಂಟು ಮಂದಿ ವಿರುದ್ಧ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.