ADVERTISEMENT

ಮೆಕ್ಕೆಜೋಳ ಬಣವೆಗೆ ಬೆಂಕಿ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 8:20 IST
Last Updated 4 ಫೆಬ್ರುವರಿ 2011, 8:20 IST

ಹೊಳಲ್ಕೆರೆ: ತಾಲ್ಲೂಕಿನ ದೊಗ್ಗನಾಳ್ ಗ್ರಾಮದಲ್ಲಿ ಮೆಕ್ಕೆಜೋಳ, ರಾಗಿ ಬಣವೆಗಳಿಗೆ ಗುರುವಾರ ಬೆಂಕಿ ತಗುಲಿ ಎಮ್ಮೆಯೊಂದು ಸುಟ್ಟು ಕರಕಲಾಗಿದ್ದು, ಅಂದಾಜು ` 15ಲಕ್ಷ ನಷ್ಟ ಸಂಭವಿಸಿದೆ.ಗ್ರಾಮದ ಹನುಮಂತಪ್ಪ, ಗಂಗಾಧರ್, ಮಂಜುನಾಥ್, ವೆಂಕಟೇಶ್, ತಿಮ್ಮರಾಜು, ಎ.ಕೆ. ಮಂಜುನಾಥ್, ಪರಮೇಶ್ವರಪ್ಪ, ಜಾನಜ್ಜಿ ಬಸಪ್ಪ, ನಾಗಪ್ಪ, ಕೆಂಚಪ್ಪ, ಭಂಗಿ ಹನುಮಂತಪ್ಪ, ರಾಜಪ್ಪ ಎಂಬುವರ ರಾಗಿ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ರುದ್ರೇಶ್, ಯಶವಂತಪ್ಪ, ಮೂಡಲಗಿರಿಯಪ್ಪ ಎಂಬುವರ ಮೆಕ್ಕೆಜೋಳದ ರಾಶಿಗಳು ಸುಟ್ಟು ಹೋಗಿದ್ದು, ಸುಮಾರು 500 ಕ್ವಿಂಟಲ್ ಮೆಕ್ಕೆಜೋಳ ಭಸ್ಮವಾಗಿದೆ.
 
ಓಂಕಾರಪ್ಪ ಅವರಿಗೆ ಸೇರಿದ ಸುಮಾರು 10 ಸಾವಿರ ತೆಂಗಿನ ಕಾಯಿಗಳು, ಕಣದಲ್ಲಿ ಸಂಗ್ರಹಿಸಲಾಗಿದ್ದ ಮರಮುಟ್ಟು ಕೂಡಾ ಸುಟ್ಟು ಹೋಗಿದೆ. ಮೂಡಲಗಿರಿಯಪ್ಪ ಅವರ ಒಂದು ಎಮ್ಮೆ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದು, ಮತ್ತೊಂದು ಸುಟ್ಟು ಹೋಗಿ. ಅಲ್ಲದೇ, ಸುಮಾರು 15 ಹುಣಸೇ ಮರಗಳು ಸುಟ್ಟುಹೋಗಿವೆ.
6 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಬಂದಿದ್ದವು. ಸ್ಥಳಕ್ಕೆ ಮಾಜಿ ಶಾಸಕ ಎಚ್. ಆಂಜನೇಯ, ಜಿ.ಪಂ. ಸದಸ್ಯೆ ಪಾರ್ವತಮ್ಮ, ತಾ.ಪಂ. ಸದಸ್ಯ ಜಗದೀಶ್, ಜಿ.ಎಸ್. ಮಂಜುನಾಥ್ ಭೇಟಿ ನೀಡಿ, ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.