ಚಳ್ಳಕೆರೆ: ಕೊರೊನಾ ಸೋಂಕಿತರಿಗೆ ಆಮ್ಲಜನಕದ ಕೊರತೆ ಉಂಟಾಗದಂತೆ ತಡೆಯಲು ಭಾನುವಾರ ಪೊಲೀಸರು, ನಗರದ ವಿವಿಧ ಗ್ಯಾರೇಜ್‌ಗಳಿಗೆ ಭೇಟಿ ನೀಡಿ 20 ಖಾಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಿದರು.
ಪಿಎಸ್‍ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ‘ಆಮ್ಲಜನಕದ ಅಭಾವದಿಂದ ಸೋಂಕಿತರ ಸಾವಿನ ಪ್ರಕರಣಗಳು ದಿನ ದಿನಕ್ಕೂ ಹೆಚ್ಚುತ್ತಿವೆ. ಗ್ಯಾಸ್ ಪ್ಲಾಂಟ್‍ಗಳಲ್ಲಿ ಆಮ್ಲಜನಕ ದೊರೆತರೂ ಅದನ್ನು ತುಂಬಿಸಲು ಸಿಲಿಂಡರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಇದರಿಂದ ಸೋಂಕಿತರಿಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’
ಎಂದರು.
ಸಂಗ್ರಹಿಸಿರುವ 20 ಖಾಲಿ ಸಿಲಿಂಡರ್‌ಗಳನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಒಪ್ಪಿಸಲಾಗುವುದು. ಮನೆ, ಅಂಗಡಿ ಹಾಗೂ ಸಂಘ–ಸಂಸ್ಥೆಯಲ್ಲಿ ಖಾಲಿ ಸಿಲಿಂಡರ್ ಹೆಚ್ಚುವರಿಯಾಗಿ ಇದ್ದಲ್ಲಿ ಕೂಡಲೇ ಇಲಾಖೆಯ ಗಮನಕ್ಕೆ ತರುವುದರ ಮೂಲಕ ಸೋಂಕಿತರಿಗೆ ನೆರವಾಗಬೇಕು ಎಂದು ಅವರು ಮನವಿ ಮಾಡಿದರು.
ಗ್ಯಾರೇಜ್ ಮಾಲೀಕ, ಖಲಿಉಲ್ಲಾ, ಮಂಜುನಾಥ್, ರಂಗಸ್ವಾಮಿ, ವೆಂಕಟೇಶ್, ಅನಿಫ್, ಸುಬಾನುಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.