ADVERTISEMENT

ವಿದ್ಯುತ್ ತಂತಿ ಬಿದ್ದು ತೋಟಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 7:19 IST
Last Updated 2 ಏಪ್ರಿಲ್ 2023, 7:19 IST
ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಈಚೆಗೆ ತೆಂಗಿನ ತೋಟಕ್ಕೆ ಬೆಂಕಿ ಬಿದ್ದಿರುವುದು
ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಈಚೆಗೆ ತೆಂಗಿನ ತೋಟಕ್ಕೆ ಬೆಂಕಿ ಬಿದ್ದಿರುವುದು   

ನಾಯಕನಹಟ್ಟಿ: ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಈಚೆಗೆ ವಿದ್ಯುತ್ ತಂತಿ ಬಿದ್ದು, ಬೆಂಕಿ ತಗುಲಿ ತೆಂಗಿನ ತೋಟ ಸುಟ್ಟಿದೆ.

ಗೌಡಗೆರೆ ಗ್ರಾಮದ ಗಾಯಿತ್ರಿ ಅವರು ಜಮೀನಿನಲ್ಲಿ 60 ತೆಂಗು, 20 ಶ್ರೀಗಂಧ, 20 ಬೇವಿನ ಸಸಿಗಳನ್ನು ನೆಟ್ಟಿದ್ದರು.

ಜಮೀನಿನ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಗಾಳಿಗೆ ಒಂದಕ್ಕೊಂದು ತಗುಲಿ ಕಿಡಿಗಳು ಬಿದ್ದು ತೆಂಗಿನ ಗರಿಗಳಿಗೆ ಬೆಂಕಿ ಬಿದ್ದಿದೆ. ಬೆಂಕಿ ಇಡೀ ತೋಟಕ್ಕೆ ವ್ಯಾಪಿಸಿದೆ.

ADVERTISEMENT

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.