ADVERTISEMENT

‘ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 12:43 IST
Last Updated 2 ಜನವರಿ 2019, 12:43 IST
ಹೊಳಲ್ಕೆರೆ ಎಂ.ಎಂ. ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಸಾಹಿತಿ ನಿಸಾರ್ ಅಹಮದ್ ಉದ್ಘಾಟಿಸಿದರು
ಹೊಳಲ್ಕೆರೆ ಎಂ.ಎಂ. ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಸಾಹಿತಿ ನಿಸಾರ್ ಅಹಮದ್ ಉದ್ಘಾಟಿಸಿದರು   

ಹೊಳಲ್ಕೆರೆ: ವಿದ್ಯಾರ್ಥಿಗಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಉಪನ್ಯಾಸಕ ನಿಸಾರ್ ಅಹಮದ್ ಹೇಳಿದರು.

ಪಟ್ಟಣದ ಎಂ.ಎಂ. ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕುಂಡದ ಸಸಿಗಳಾಗದೆ, ಪರಿಸರದಲ್ಲಿ ಬೆಳೆಯುವ ಮರಗಳಾಗಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿ ಸಕ್ತಿಯವಾಗಿ ಪಾಲ್ಗೊಳ್ಳಬೇಕು. ಸತತ ಅಧ್ಯಯನ, ಅವಿರತ ಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದರು.

ADVERTISEMENT

ಕ್ರೀಡೆ ಹಾಗೂ ವಿವಿಧ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉಪ ಪ್ರಾಂಶುಪಾಲರಾದ ನಿರ್ಮಲಾ ದೇವಿ, ದಾನಿಗಳಾದ ಬೆಂಗಳೂರಿನ ಸುಧಾಮಣಿ, ಶ್ರೀಕಂಠಯ್ಯ, ಜಮದಗ್ನಿ, ಶಿಕ್ಷಕರಾದ ಕೆ.ಎಂ.ಮೋಹನ್, ಎಂ.ಎಸ್.ಮೂಲಿಮನಿ, ಯಶೋದಮ್ಮ, ಪಿ.ಕೆ. ರಾಜಪ್ಪ ಇದ್ದರು.

ಶಿಕ್ಷಕಿ ಜನತಾ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು. ಎಂ.ಜಿ.ಚಂದ್ರಶೇಖರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.