ADVERTISEMENT

ನ. 1ರಿಂದ ಅಂತರ್ಜಾಲ ನಾಟಕೋತ್ಸವ

ಸಾಣೇಹಳ್ಳಿ: ಎಲ್ಲಿದ್ದೀರೋ ಅಲ್ಲಿಂದಲೇ ನಾಟಕೋತ್ಸವ ವೀಕ್ಷಿಸಲು ಸ್ವಾಮೀಜಿ ಮನವಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:10 IST
Last Updated 27 ಅಕ್ಟೋಬರ್ 2020, 4:10 IST
2019ರ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ನಾಟಕದ ದೃಶ್ಯ
2019ರ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ನಾಟಕದ ದೃಶ್ಯ   

ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನ. 1ರಿಂದ 7ರವರೆಗೆ 2020ರ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವ ಆಯೋಜಿಸಲಾಗಿದೆ.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರತಿದಿನ ಬೆಳಿಗ್ಗೆ 8ಕ್ಕೆ ಧ್ಯಾನ, ಮೌನ, ಪ್ರಾರ್ಥನೆ, ಚಿಂತನ ಕಾರ್ಯಕ್ರಮಗಳು ನಡೆಯಲಿವೆ. ಶಿವಸಂಚಾರ ಕಲಾವಿದರಾದ ಕೆ.ಜ್ಯೋತಿ, ಕೆ.ದಾಕ್ಷಾಯಿಣಿ, ನಾಗರಾಜ ಸಾಣೇಹಳ್ಳಿ, ತಬಲಾಸಾಥಿ- ಶರಣ್‌ಕುಮಾರ್ ಹೆರೂರ್ ಅವರು ವಚನಗೀತೆ ಹಾಡುವರು.

ನ.1ರ ಸಂಜೆ 6ಕ್ಕೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎನ್‌.ಉಪಾಧ್ಯಾಯ, ‘ಕನ್ನಡ ಅಳಿವು, ಉಳಿವು: ದೂರದ ನೋಟ’ ಕುರಿತು ಉಪನ್ಯಾಸ ನೀಡುವರು. ಡಾ.ಎಚ್‌.ಎಲ್‌.ಪುಷ್ಪಾ, ‘ನೊಂದವರ ನೋವು ನೋಯದವರೆತ್ತ ಬಲ್ಲರೊ?’ ಕೃತಿ ಲೋಕಾರ್ಪಣೆಗೊಳಿಸುವರು. ಶಿವಸಂಚಾರದ ಕಲಾವಿದರು ‘ಧನ್ವಂತರಿ ಚಿಕಿತ್ಸೆ’ ನಾಟಕ ಪ್ರದರ್ಶಿಸುವರು.

ADVERTISEMENT

ನ. 2ರ ಸಂಜೆ 6ಕ್ಕೆ ‘ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರ’ ವಿಷಯ ಕುರಿತು ಜವಾಹರಲಾಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವೆಂಕಟಾಚಲ ಹೆಗಡೆ ಉಪನ್ಯಾಸ
ನೀಡುವರು. ‘ಸಂಸ್ಕಾರ’ ಕೃತಿಯನ್ನು ಬೆಂಗಳೂರಿನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ವಿಕಾಸಕಿ ಮುಕ್ತಾ ಬಿ.ಕಾಗಲಿ ಲೋಕಾರ್ಪಣೆ
ಗೊಳಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರು ‘ಪಾಪು ಗಾಂಧಿ’ ನಾಟಕ ಪ್ರದರ್ಶಿಸುವರು.

ನ. 3ರ ಸಂಜೆ 6ಕ್ಕೆ ‘ಕನ್ನಡ ರಂಗಭೂಮಿಯ ಮುಂದಿನ ಹೆಜ್ಜೆಗಳು’ ವಿಷಯ ಕುರಿತು ಮುಂಬೈ ರಂಗಕರ್ಮಿ ಡಾ.ಭರತ್‌ಕುಮಾರ್ ಪೋಲಿಪೋ ಹಾಗೂ ‘ಪ್ರಸ್ತುತ ಶೈಕ್ಷಣಿಕ ಸವಾಲುಗಳು’ ವಿಷಯ ಕುರಿತು ನಿವೃತ್ತ ಪ್ರಾಂಶುಪಾಲರಾದ ಆರ್‌.ಜಯಕುಮಾರಿ ಉಪನ್ಯಾಸ ನೀಡುವರು. ಶಿವದೇಶ ಸಂಚಾರದ ಕಲಾವಿದರು ‘ಮರಣ್ ಹೀ ಮಹಾನವಮಿ’ ನಾಟಕ ಅಭಿನಯಿಸುವರು.

ನ. 4ರ ಸಂಜೆ 6ಕ್ಕೆ ‘ಪರಿಸರ ಅತಿಮಾನವ’ ವಿಷಯ ಕುರಿತು
ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಹಾಗೂ ‘ಮಳೆ ನೀರು ಸಮಾಜ’
ವಿಷಯ ಕುರಿತು ಸಾಮಾಜಿಕ ಹೋರಾಟಗಾರ್ತಿ ರೂಪಾ ಹಾಸನ ಉಪನ್ಯಾಸ ನೀಡುವರು. ಬೆಂಗಳೂರಿನ ಬೆನಕ ಅವರು ‘ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ’ ನಾಟಕ ಪ್ರದರ್ಶಿಸುವರು.

ನ. 5ರ ಸಂಜೆ 6ಕ್ಕೆ ‘ಅಮೆರಿಕದಲ್ಲಿ ಕನ್ನಡ ರಂಗಭೂಮಿ’ ವಿಷಯ ಕುರಿತು ಅಮೆರಿಕ ನಾವಿಕ ಅಧ್ಯಕ್ಷ ವಲ್ಲೀಶ್ ಶಾಸ್ತ್ರಿ, ‘ಶರಣರ ಕೃಷಿ’ ವಿಷಯ ಕುರಿತು ಚಾಮರಾಜನಗರ ಡಿವೈಎಸ್‌ಪಿ ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ ಉಪನ್ಯಾಸ ನೀಡುವರು. ಶಿವಸಂಚಾರ ಕಲಾವಿದರು ‘ಮುದುಕನ ಮದುವೆ’ ನಾಟಕ ಅಭಿನಯಿಸುವರು.

ನ. 6ರ ಮಧ್ಯಾಹ್ನ 2.30ಕ್ಕೆ ‘ಕೊರೊನಾ’ ಬೀದಿನಾಟಕವನ್ನು ಶಿವಕುಮಾರ ಕಲಾ ಸಂಘದವರು ಪ್ರದರ್ಶಿಸುವರು. ಸಂಜೆ 6ಕ್ಕೆ ‘ಶಿವಸಂಚಾರ ಮತ್ತು ರಂಗಭೂಮಿ’ ವಿಷಯ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ ಎನ್.ಆರ್.ವಿಶುಕುಮಾರ್, ‘ಕುಟುಂಬ ಮತ್ತು ರಂಗಭೂಮಿ’ ವಿಷಯ ಕುರಿತು ನಿವೃತ್ತರ ಪ್ರಾಂಶುಪಾಲರಾದ ಲಲಿತಾ ಕಪ್ಪಣ್ಣ ಉಪನ್ಯಾಸ ನೀಡುವರು. ಮೈಸೂರಿನ ನಟನಾ ತಂಡದವರು ‘ಉಷಾಹರಣ’ ನಾಟಕ ಪ್ರದರ್ಶಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.