ADVERTISEMENT

ರಂಗೇನಹಳ್ಳಿ: ಗಾಳಿ ಮಳೆಗೆ ಅಪಾರ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 17:02 IST
Last Updated 2 ಜೂನ್ 2023, 17:02 IST
ಧರ್ಮಪುರ ಹೋಬಳಿಯ ರಂಗೇನಹಳ್ಳಿಯಲ್ಲಿ ಗಾಳಿ ಮಳೆಗೆ ಮೆಣಸಿನ ಗಿಡ ನೆಲಕ್ಕುರುಳಿರುವ ದೃಶ್ಯ
ಧರ್ಮಪುರ ಹೋಬಳಿಯ ರಂಗೇನಹಳ್ಳಿಯಲ್ಲಿ ಗಾಳಿ ಮಳೆಗೆ ಮೆಣಸಿನ ಗಿಡ ನೆಲಕ್ಕುರುಳಿರುವ ದೃಶ್ಯ   

ಧರ್ಮಪುರ: ಹೋಬಳಿಯ ರಂಗೇನಹಳ್ಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿ ಮತ್ತು ಸುರಿದ ಮಳೆಗೆ ಬಾಳೆ ತೋಪು, ಮಾವು ಮತ್ತು ಮೆಣಸಿನ ಗಿಡಗಳು ನೆಲಕ್ಕುರುಳಿವೆ. 

ಚೇತನ್ ಕುಮಾರ್ ಅವರ ಮೂರು ಎಕರೆಯಲ್ಲಿ ಸಮೃದ್ಧವಾಗಿ ಬೆಳೆದು ಕಾಯಿ ಬಿಟ್ಟಿದ್ದ ಮೆಣಸಿನ ಗಿಡಗಳು ನೆಲಕ್ಕುರುಳಿವೆ. ಇದೇ ಗ್ರಾಮದ ವೆಂಕಟೇಶ್ ಅವರ ಮೂರು ಎಕರೆಯಲ್ಲಿನ ಬಾಳೆ ತೋಪು ಹಾಗೂ ಉತ್ತಮವಾಗಿ ಫಸಲು ಬಿಟ್ಟಿದ್ದ ಮೂರು ಎಕರೆಯಲ್ಲಿನ ಮಾವಿನ ಕಾಯಿಗಳು ಧರೆಗೆ ಉರುಳಿವೆ.

‘ಮಳೆಯಿಂದ ನಮಗೆ ಸಾಕಷ್ಟು ಹಾನಿ ಸಂಭವಿಸಿದ್ದು ಸರ್ಕಾರ ಸಹಾಯಧನ ನೀಡಬೇಕು’ ಎಂದು ಬಿ.ಜಿ. ಹನುಮಂತರಾಯ ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.