ಮೊಳಕಾಲ್ಮುರು: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ.
ರಾತ್ರಿ 11ಕ್ಕೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆ ಕಾಲ ಸುರಿಯಿತು. ಬೆಳಗಿನ ಜಾವ ಕೆಲ ಗ್ರಾಮಗಳ ಸುತ್ತ ಜಿಟಿಜಿಟಿ ಮಳೆ ಬಿದ್ದಿದೆ.
ರಾಯಾಪುರ ಸುತ್ತಲಿನ ಪ್ರದೇಶದಲ್ಲಿ ಉತ್ತಮ ವರ್ಷಧಾರೆಯಾಗಿದ್ದು, ಇಲ್ಲಿ 8 ಮಿ.ಮೀ. ಮಳೆ ದಾಖಲಾಗಿದೆ. ರಾಂಪುರದಲ್ಲಿ 6 ಸೆಂ.ಮೀ, ಮೊಳಕಾಲ್ಮುರು–2 ಸೆಂ.ಮೀ, ಬಿ.ಜಿ.ಕೆರೆ–1 ಮಿ.ಮೀ. ಮತ್ತು ದೇವಸಮುದ್ರದಲ್ಲಿ– 2 ಸೆಂ.ಮೀ. ಮಳೆ ದಾಖಲಾಗಿದೆ.
ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವು ಜೂನ್‌ನಲ್ಲಿ ಆರಂಭವಾಗಲಿದ್ದು, ಬಿತ್ತನೆ ಪೂರ್ವ ಕಾರ್ಯಗಳಾದ ಹೊಲ ಸಿದ್ಧತೆ, ಗೊಬ್ಬರ ಪೂರೈಕೆ, ಸ್ವಚ್ಛತೆ ಕೈಗೊಳ್ಳಲು ಮಳೆ ಅನುಕೂಲ ಮಾಡಿಕೊಟ್ಟಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ತುಸು ತಂಪು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.