ADVERTISEMENT

ಅನುವಾದಕರ ಅವಾಂತರ:ಕನ್ನಡಿಗರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 9:40 IST
Last Updated 4 ಮಾರ್ಚ್ 2012, 9:40 IST

ಬದಿಯಡ್ಕ: ಕಳೆದ ಶನಿವಾರದಂದು ನಡೆದ ಕೇರಳ ಲೋಕಸೇವಾ ಆಯೋಗ ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನೇಕ ಗೊಂದಲ ಹಾಗೂ ತಪ್ಪುಗಳಿಂದಾಗಿ ಕನ್ನಡಿಗರು ಅಂಕ ಕಳೆದುಕೊಳ್ಳ ಬೇಕಾಗಿದೆ. ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಕೊನೆಯ ದರ್ಜೆ ಸೇವಕ ಹುದ್ದೆಗಾಗಿ ನಡೆದ ಲಿಖಿತ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಅನೇಕ ತಪ್ಪುಗಳು ನುಸುಳಿಕೊಂಡಿದ್ದು, ಉದ್ಯೋಗಾರ್ಥಿ ಗಳನ್ನು ಗೊಂದಲಕ್ಕೀಡು ಮಾಡಿದೆ.
 
ಪ್ರತೀ ಪರೀಕ್ಷೆಯಲ್ಲೂ ಕೂಡಾ ಇಂತಹಾ ತಪ್ಪುಗಳನ್ನು ಲೋಕಸೇವಾ ಇಲಾಖೆ ಮಾಡುತ್ತಿರುವುದಾಗಿ ಕನ್ನಡ ಉದ್ಯೋ ಗಾರ್ಥಿಗಳು ಬೇಸರದಿಂದ ಹೇಳುತ್ತಾರೆ.

ಈ ಬಾರಿ ಮಲಯಾಳಂ ಪ್ರಶ್ನೆ ಪತ್ರಿಕೆಯಲ್ಲಿ `ಮಲಯಾಳಂನ ಮೊದಲ ಪತ್ರಿಕೆ ಯಾವುದು ?~ ಎಂಬ ಪ್ರಶ್ನೆಯು ಕನ್ನಡ ಪ್ರಶ್ನೆಪತ್ರಿಕೆಯಲ್ಲಿ `ಮಲಯಾಳಂನ ಮೊದಲ ಸಿನೆಮಾ ಯಾವುದು ?~ ಎಂಬಂತೆ ಪ್ರಕಟವಾಗಿದೆ. ಆದರೆ ಆಯ್ಕೆಗಿರುವ ಉತ್ತರಗಳು ಮಾತ್ರ ಪತ್ರಿಕೆಗಳ ಹೆಸರಿನಲ್ಲಿದೆ.
 
ಆದರೆ ಬಹುತೇಕ ಅಭ್ಯರ್ಥಿಗಳು ಪ್ರಶ್ನೆಗೆ ಉತ್ತರಿಸದಿರಬಹುದು. ಇಂತಹಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಅಂಕವೂ ಕೂಡಾ ಅಭ್ಯರ್ಥಿಯ ಭವಿಷ್ಯ ನಿರ್ಣಯಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದು ಅನುವಾದಕರ ನಿರ್ಲಕ್ಷ್ಯದಿಂದ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಅದೇ ರೀತಿ `ಕೇರಳಪ್ಪಷಮ್~ ಎಂಬ ಪದ ಪ್ರಯೋಗ ಕನ್ನಡದಲ್ಲಿ ಇಲ್ಲ. ಇದು ಯಾವ ಹಣ್ಣು ಎಂಬ ಪ್ರಶ್ನೆಗೆ ಉತ್ತರಿಸುವುದಕ್ಕೆ ಕನ್ನಡಿಗರು ಪೇಚಾಡು ವಂತಾಗಿದೆ. ಕನ್ನಡ ಉದ್ಯೋಗಾ ರ್ಥಿಗಳು ಕನ್ನಡ ಪ್ರಶ್ನೆಪತ್ರಿಕೆಯನ್ನೇ ಪಡೆದುಕೊಳ್ಳಬೇಕೆಂಬ ನಿರ್ಬಂಧ ಇದೆ.

ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪುಗಳು ಮಲಯಾಳಂ ಪ್ರಶ್ನೆ ಪತ್ರಿಕೆ ಯಲ್ಲಿ ಇಲ್ಲ. ಪ್ರಶ್ನೆಪತ್ರಿಕೆಯನ್ನು ಭಾಷೆಯ ಬಗ್ಗೆ ಅನುಭವಸ್ಥರಾದ ಕನ್ನಡಿಗರಲ್ಲಿ ತಯಾರಿ ಸಬೇಕೆಂದು ಅಭ್ಯರ್ಥಿಗಳು ಸಂಬಂಧಿಸಿದ ಇಲಾಖೆಯಲ್ಲಿ ವಿನಂತಿಸಿ ್ದದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.