ADVERTISEMENT

ಕ್ಷಿಪ್ರ ನ್ಯಾಯ ವ್ಯವಸ್ಥೆ: ಡಿವಿಎಸ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 4:30 IST
Last Updated 13 ಅಕ್ಟೋಬರ್ 2011, 4:30 IST

ಸುಳ್ಯ: ಸಾಮಾನ್ಯ ಮನುಷ್ಯನಿಗೂ ಕೈಗೆಟುಕುವ ಕ್ಷಿಪ್ರ ನ್ಯಾಯ ಸಿಗಬೇಕು. ನ್ಯಾಯಾಂಗದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು 2011-12ನೇ ಸಾಲಿನಲ್ಲಿ ಸರ್ಕಾರ ರೂ 75 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು. 

ಕೆವಿಜಿ ಕಾನೂನು ಕಾಲೇಜಿನ ನೂತನ ಕಟ್ಟಡ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ವಕೀಲರು ಸಾಮಾನ್ಯ ಜನರ ಕೈಗೆಟುಕುವುದಿಲ್ಲ ಎಂಬ ಭಾವನೆ ಇದೆ. ಮಾನವೀಯತೆಯ ಕಡೆಗೆ ಹೆಚ್ಚು ಒತ್ತು ಕೊಡುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು. 

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಸಂಸದ ನಳಿನ್‌ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ರಾಜ್ಯ ವಕೀಲರ ಸಂಘದ ಅಧ್ಯಕ್ಷ ಮಗದಂ ಆನಂದ ಕುಮಾರ್ ಅಪ್ಪು, ಶಾಸಕ ಎಸ್.ಅಂಗಾರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷ ಡಾ.ಕೆ.ವಿ.ಚಿದಾನಂದ, ಕಾರ್ಯದರ್ಶಿ ಪಡ್ಡಂಬೈಲು ವೆಂಕಟ್ರಮಣ ಗೌಡ, ನಿರ್ದೇಶಕಿ ಶೋಭಾ ಚಿದಾನಂದ, ಕೆ.ವಿ.ಹೇಮನಾಥ್, ಪ್ರಾಂಶುಪಾಲ ಎನ್.ಜಿ.ರಾಮಚಂದ್ರ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.