ADVERTISEMENT

ಜಾತಿ ವಿಭಜಕ ಕಾಂಗ್ರೆಸ್‌ ಸರ್ಕಾರ: ಯೋಗಿ

ಸುಳ್ಯದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ; ಉತ್ತರ ಪ್ರದೇಶದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 9 ಮೇ 2018, 10:49 IST
Last Updated 9 ಮೇ 2018, 10:49 IST

ಸುಳ್ಯ: ‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮ, ಜಾತಿ, ಸಮುದಾಯಗಳನ್ನು ವಿಭಜಿಸಿ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ’ ಎಂದು  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದರು.

ಇಲ್ಲಿನ ಚೆನ್ನಕೇಶವ ದೇವಸ್ಥಾನದ ಬಳಿ ಮಂಗಳವಾರ  ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಫಿಯಾ ಶಕ್ತಿಗಳೊಂದಿಗೆ ಸೇರಿಕೋಡು ಅಧಿಕಾರ ನಡೆಸಿದರು. ಜಿಹಾದಿ ಆತಂಕವಾದಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಕ್ರಮ ಗೋವು ಸಾಗಣೆ, ಕಸಾಯಿಖಾನೆ, ಗೋಹತ್ಯೆಗೆ ಪ್ರೋತ್ಸಾಹ ನೀಡುತ್ತಿದೆ’ ಎಂದರು.

ADVERTISEMENT

ಬೇನಾಮಿ ಆಸ್ತಿ ಇದ್ದರೆ ಹೆಳಿ ನಿಮಗೇ ಕೊಡುತ್ತೇನೆ: ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಮಾತನಾಡಿ ‘ಬೇನಾಮಿ ಆಸ್ತಿ ಹೊಂದಿದ್ದೇನೆ ಎಂದು ಹೇಳುವ ಕಾಂಗ್ರೆಸ್‌ನವರೇ ಹುಡುಕಿಕೊಡಿ, ಇದ್ದರೆ ಅದನ್ನು ನಿಮಗೆ ಕೊಡುತ್ತೇನೆ’ ಎಂದು ಸವಾಲೆಸದರು.

ಬಿಜೆಪಿ  ಕೇರಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್, ಮುಖಂಡ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಚುನಾವಣಾ ಉಸ್ತುವಾರಿ ಎ.ವಿ.ತೀರ್ಥರಾಮ ಮಾತನಾಡಿದರು. ಬಿಜೆಪಿ ಮುಖಂಡರಾದ ಪ್ರಕಾಶ್ ಹೆಗ್ಡೆ, ಅಡ್ಡಂತ್ತಡ್ಕ ದೇರಣ್ಣ ಗೌಡ, ಚನಿಯ ಕಲ್ತಡ್ಕ, ಶೀಲಾವತಿ ಮಾಧವ ವೇದಿಕೆಯಲ್ಲಿದ್ದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ವಂದಿಸಿದರು.

ಗೋಣಿಕೊಪ್ಪದ ಪ್ರಯಾಣ ಮೊಟಕು: ಯೋಗಿ ಅವರು ಗೋಣಿಕೊಪ್ಪಲಿಗೆ ಹೋಗಿ ಸುಳ್ಯಕ್ಕೆ ಬರಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಅವರಿದ್ದ ಹೆಲಿಕಾಪ್ಟರ್‌ ಅಲ್ಲಿಗೆ ತೆರಳುವುದು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಒಂದೂವರೆ ತಾಸು ಮುಂಚಿತವಾಗಿ ಸುಳ್ಯಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.