ADVERTISEMENT

ಶೇ 40 ಕಮಿಷನ್: ತನಿಖೆ ನಡೆಯಲಿ

ಸೇವಾದಳ ಕಾರ್ಯಕರ್ತರಿಗೆ ಸಮವಸ್ತ್ರ ವಿತರಣೆ: ಅಭಯಚಂದ್ರ ಜೈನ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 5:09 IST
Last Updated 3 ಡಿಸೆಂಬರ್ 2021, 5:09 IST
ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ ಸೇವಾದಳದ ಕಾರ್ಯಕರ್ತರಿಗೆ ಮಾಜಿ ಸಚಿವ ಅಭಯಚಂದ್ರ ಜೈನ್,‌ ರಾಜಶೇಖರ್ ಕೋಟ್ಯಾನ್ ಸಮವಸ್ತ್ರ ವಿತರಿಸಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ ಸೇವಾದಳದ ಕಾರ್ಯಕರ್ತರಿಗೆ ಮಾಜಿ ಸಚಿವ ಅಭಯಚಂದ್ರ ಜೈನ್,‌ ರಾಜಶೇಖರ್ ಕೋಟ್ಯಾನ್ ಸಮವಸ್ತ್ರ ವಿತರಿಸಿದರು.   

ಮೂಲ್ಕಿ: ರಾಜ್ಯದಲ್ಲಿ ಆಡಳಿತ ನಡೆಸುವ ಬಿಜೆಪಿ ಸರ್ಕಾರವು ಗುತ್ತಿಗೆದಾರರಿಂದ ಶೇ 40 ಕಮಿಷನ್ ಪಡೆಯುತ್ತಿದ್ದು, ಈ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಈಗಾಗಲೇ ರಾಷ್ಟ್ರಪತಿಗೆ ದೂರು ಸಲ್ಲಿಸಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಆಗ್ರಹಿಸಿದರು.

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸೇವಾದಳದ ವಿಭಾಗದ ವತಿಯಿಂದ ಸೇವಾದಳ ಕಾರ್ಯಕರ್ತರಿಗೆ ಸಮವಸ್ತ್ರ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸೇವಾದಳದಂತಹ ಶಿಸ್ತುಬದ್ಧ ವಿಭಾಗವಿದೆ. ಉತ್ತಮ ನಾಯಕರನ್ನು ಹೊರತರಲು ಇದು ಅನುಕೂಲವಾಗುತ್ತದೆ ಎಂದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್ ಸಮವಸ್ತ್ರ ವಿತರಿಸಿದರು. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಪಿ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಕೆಪಿಸಿಸಿ ಸಂಯೋಜಕ ಎಚ್. ವಸಂತ್ ಬೆರ್ನಾಡು ಸೇವಾದಳದ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯರಾದ ವಿಮಲಾ ಪೂಜಾರಿ, ಯೋಗೀಶ್ ಕೋಟ್ಯಾನ್, ಮಾಜಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬೊಳ್ಳೂರು, ಡಿಸಿಸಿ ಸದಸ್ಯರಾದ ಹರಿಯಪ್ಪ ಚೇಳ್ಯಾರು, ಪ್ರಮುಖರಾದ ಜನಾರ್ದನ ಬಂಗೇರ, ಧನರಾಜ್ ಕೋಟ್ಯಾನ್, ರಮೇಶ್ ಪೂಜಾರಿ, ಪ್ರಮೋದ್ ಕುಮಾರ್, ಭೀಮಶಂಕರ್ ಆರ್.ಕೆ., ಮಂಜುನಾಥ್ ಕಂಬಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.