ADVERTISEMENT

ಪುತ್ತೂರಿನಲ್ಲಿ ಬಿಜೆಪಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:09 IST
Last Updated 23 ಮೇ 2019, 13:09 IST
ಪುತ್ತೂರಿನ ಬಿಜೆಪಿ ಪಕ್ಷದ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಹರ್ಷಾಚರಣೆ ನಡೆಸಿದರು
ಪುತ್ತೂರಿನ ಬಿಜೆಪಿ ಪಕ್ಷದ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಹರ್ಷಾಚರಣೆ ನಡೆಸಿದರು   

ಪುತ್ತೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರು ಭರ್ಜರಿ ಜಯ ಸಾಧಿಸುವುದು ಹಾಗೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತವಾದ ಬಳಿಕ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಪ್ರಮುಖರು ಪುತ್ತೂರು ನಗರದ ವಿವಿಧ ವಿವಿಧ ಕಡೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ದರ್ಬೆ ಜಂಕ್ಷನ್, ಪರ್ಲಡ್ಕ, ಕೋರ್ಟ್‌ ರಸ್ತೆ, ಫಿಲೋನಗರ , ಕೂರ್ನಡ್ಕ, ಬೊಳುವಾರು ,ನೆಹರೂನಗರ ಮೊದಲಾದ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದರು. ಬಿಜೆಪಿ ಬಾವುಟದೊಂದಿಗೆ ನಗರದ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರು. ನಗರದೆಲ್ಲೆಡೆ ‘ಮೋದಿ’ ಜಯಕಾರ ಮೊಳಗಿತು.

ಕಚೇರಿ ಬಳಿ: ಬಿಜೆಪಿ ಪಕ್ಷದ ಕಚೇರಿಯಲ್ಲಿ ಬೆಳಿಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಸೇರಿ, ದೂರದರ್ಶನದ ಮೂಲಕ ಚುನಾವಣಾ ಫಲಿತಾಂಶ ವೀಕ್ಷಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಪಕ್ಷ ವಿಜಯದ ಹಾದಿಯಲ್ಲಿ ಸಾಗುತ್ತಿದ್ದಂತೆಯೇ ಪಕ್ಷದ ಕಚೇರಿ ಎದುರು ಆಯೋಜಿಸಿದ್ದ ವಿಜಯೋತ್ಸವದಲ್ಲಿ ಸಂಭ್ರಮ ಹಂಚಿಕೊಂಡರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್ ಇದ್ದರು.

ADVERTISEMENT

ಈಶ್ವರಮಂಗಲ: ಈಶ್ವರಮಂಗಲದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು. ಕೇಸರಿ ಶಟರ್ು ಧರಿಸಿ ಮತ್ತು ಬಿಜೆಪಿ ಬಾವುಟ ಹಿಡಿದು ಬಿಜೆಪಿ ಕಾರ್ಯಕರ್ತರು ಹಷರ್ಾಚರಣೆ ನಡೆಸಿದರು. ಬಿಜೆಪಿ ಪ್ರಮುಖರಾದ ರಾಜೇಂದ್ರ ಪ್ರಸಾದ್ ಮೇನಾಲ, ಅಮರ್ನಾಥ್ ಆಳ್ವ ಕನರ್ೂರು, ರಾಜೇಶ್ ಪಂಚೋಡಿ, ಶರತ್ ರೈ ನೆಲ್ಲಿತ್ತಡ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.