ADVERTISEMENT

ಸಣ್ಣ ಉದ್ಯಮಗಳಿಗಾಗಿ ‘ಕಾರ್ಪ್ ಎಸ್‌ಎಂಇ ಸುವಿಧಾ’

​ಪ್ರಜಾವಾಣಿ ವಾರ್ತೆ
Published 24 ಮೇ 2019, 15:35 IST
Last Updated 24 ಮೇ 2019, 15:35 IST
ಮಂಗಳೂರಿನ ಕಾರ್ಪೊರೇಷನ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಪಿ.ವಿ. ಭಾರತಿ ಅವರು ಕಾರ್ಪ್ ಎಸ್‌ಎಂಇ ಸುವಿಧಾ ಸೌಲಭ್ಯವನ್ನು ಉದ್ಘಾಟಿಸಿದರು.
ಮಂಗಳೂರಿನ ಕಾರ್ಪೊರೇಷನ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಪಿ.ವಿ. ಭಾರತಿ ಅವರು ಕಾರ್ಪ್ ಎಸ್‌ಎಂಇ ಸುವಿಧಾ ಸೌಲಭ್ಯವನ್ನು ಉದ್ಘಾಟಿಸಿದರು.   

ಮಂಗಳೂರು: ಜಿಎಸ್‌ಟಿ ನೋಂದಾಯಿತ ಲಘು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗಾಗಿ ಕಾರ್ಪೊರೇಷನ್‌ ಬ್ಯಾಂಕ್‌ ‘ಕಾರ್ಪ್‌ ಎಸ್‌ಎಂಇ ಸುವಿಧಾ’ ಸೌಲಭ್ಯವನ್ನು ಆರಂಭಿಸಿದೆ.

ಉದ್ಘಾಟಿಸಿ ಮಾತನಾಡಿದ ಕಾರ್ಪೊರೇಷನ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕಿ, ಸಿಇಒ ಪಿ.ವಿ. ಭಾರತಿ, ಕಾರ್ಪ್‌ ಎಸ್‌ಎಂಇ ಸುವಿಧಾ ಮೂಲಕ ಸಣ್ಣ ಉದ್ಯಮಿಗಳಿಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಅಲ್ಲದೇ ಉದಯೋನ್ಮುಖ ಉದ್ಯಮಿಗಳಿಗೂ ಹಲವು ರಿಯಾಯಿತಿ ನೀಡಲಾಗುತ್ತಿದೆ. ಸಣ್ಣ, ಲಘು, ಮಧ್ಯಮ ಉದ್ಯಮ ಕ್ಷೇತ್ರಕ್ಕೆ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಸೌಲಭ್ಯವೂ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ತಿಳಿಸಿದರು.

ಸಣ್ಣ ಉದ್ಯಮಿಗಳಿಗೆ ಉತ್ತಮ ಸೇವೆ ನೀಡುವಲ್ಲಿ ಕಾರ್ಪೊರೇಷನ್‌ ಬ್ಯಾಂಕ್ ಬದ್ಧವಾಗಿದೆ. ಮುದ್ರಾ, ಸ್ಟ್ಯಾಂಡ್‌ ಅಪ್‌ ಇಂಡಿಯಾ ಸೇರಿದಂತೆ ಸರ್ಕಾರದ ಯೋಜನೆಗಳಲ್ಲಿ ಬ್ಯಾಂಕ್‌ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಆನ್‌ಲೈನ್‌ ಸಾಲ ಸೌಲಭ್ಯ, ದೇಶದ 177 ಶಾಖೆಗಳಲ್ಲಿ ಕೇಂದ್ರಿಕೃತ ಸಾಲ ಸೌಕರ್ಯ, ಸಣ್ಣ ಕೈಗಾರಿಕೆಗಳ ಪುನಶ್ಚೇತನ, ಪುನರುಜ್ಜೀವನಕ್ಕೆ ಆನ್‌ಲೈನ್‌ ಸೌಲಭ್ಯ, ಮಹಿಳಾ ಉದ್ಯಮಿಗಳಿಗೆ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಲಿದೆ ಎಂದು ವಿವರಿಸಿದರು.

ADVERTISEMENT

ಕಾರ್ಯಕಾರಿ ನಿರ್ದೇಶಕ ಗೋಪಾಲ ಮುರಳಿ ಭಗತ್‌, ಮಹಾಪ್ರಬಂಧಕರು, ಹಿರಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.