ADVERTISEMENT

ಪ್ರಾಚೀನ ಕಲೆ ಉಳಿಸುವ ಚಿಂತನೆ ನಡೆಯಲಿ: ವೀರೇಂದ್ರ ಹೆಗ್ಗಡೆ

ಚಿತ್ತಾರ ಕಲೆ ರಚನಾ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 7:01 IST
Last Updated 8 ಅಕ್ಟೋಬರ್ 2022, 7:01 IST
ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಎರಡು ದಿನ ನಡೆಯುವ ಚಿತ್ತಾರ ಕಲೆ ರಚನಾ ತರಬೇತಿ ಶಿಬಿರದಲ್ಲಿ ವಸ್ತುಗಳ ಪ್ರದರ್ಶನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ವೀಕ್ಷಿಸಿದರು
ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಎರಡು ದಿನ ನಡೆಯುವ ಚಿತ್ತಾರ ಕಲೆ ರಚನಾ ತರಬೇತಿ ಶಿಬಿರದಲ್ಲಿ ವಸ್ತುಗಳ ಪ್ರದರ್ಶನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ವೀಕ್ಷಿಸಿದರು   

ಉಜಿರೆ: ‘ನಮ್ಮ ಪ್ರಾಚೀನ ಕಲೆಗಳು ನಶಿಸುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುವ ಬಗ್ಗೆ ಚಿಂತನೆ ನಡೆಯಬೇಕಿದೆ. ಹಳ್ಳಿಗಳ ಪ್ರತಿ ಮನೆಯಲ್ಲೂ ಹಾಸುಹೊಕ್ಕಿದ್ದ ಕಲೆಗಳು ಕಣ್ಮರೆಯಾಗು ತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಕಲಾಸಕ್ತರಿಗೆ ವಿಶೇಷ ತರಬೇತಿ ನೀಡುವ ಕಾರ್ಯಾಗಾರ ಎಲ್ಲಡೆ ನಡೆಯಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಎರಡು ದಿನಗಳ ಚಿತ್ತಾರ ಕಲೆ ರಚನಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಜನಪದ ಕಲೆಗಳು ಪರಂಪರೆ- ಆಚರಣೆಗಳ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿ ಯುತ್ತಿದ್ದವು. ಅಪೂರ್ವ ಕಲೆಗಳ ಔಚಿತ್ಯದ ಅರಿವಿನ ಕೊರತೆಯಿಂದ ಇತ್ತೀಚಿಗೆ ಅವುಗಳ ಕುರಿತು ಆಸಕ್ತಿ ಕಡಿಮೆಯಾಗಿದೆ. ಇಲ್ಲಿ ಹಮ್ಮಿಕೊಂಡಿರುವ ಶಿಬಿರವು ಯುವ ಜನರಿಗೆ ಕಲೆಯ ಕುರಿತು ಆಸಕ್ತಿ ಹಾಗೂ ಅರಿವನ್ನು ಹೊಂದಲು ಸಹಕಾರಿ ಎಂದರು.

ADVERTISEMENT

ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ, ‘ಹಳ್ಳಿಗಳಲ್ಲಿ ಹಸೆ, ರಂಗೋಲಿ, ಕಸೂತಿ ಕಲೆ ಮುಂತಾದ ಅನೇಕ ಕಲಾ ನೈಪುಣ್ಯಗಳು ಜನ ಜೀವನದೊಂದಿಗೆ ಬೆಸೆದಿದ್ದವು. ಕಾಲ ಕಳೆದಂತೆ ಇವೆಲ್ಲ ತೆರೆಮರೆಗೆ ಸರಿದಿದ್ದು, ಇವುಗಳ ಪುನರುಜ್ಜೀವಗೊಳಿಸುವ ಪ್ರಕ್ರಿಯೆ ನಡೆಯಬೇಕಿದೆ. ನಮ್ಮ ನೆಲದ ಕಲಾ ವೈಭವವಕ್ಕೆ ಇಂತಹ ಶಿಬಿರಗಳು ಕನ್ನಡಿಯಾಗಲಿದೆ. ಮಂಜೂಷಾ ವಸ್ತು ಸಂಗ್ರಹಾಲಯದ ಮೂಲಕ ಪ್ರಾಚೀನ ಕಲೆಗಳ ಮಾಹಿತಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ’ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ‘ಸ್ಥಳೀಯ ಕಲೆ ಪುನರುಜ್ಜೀವ ಸಂಸ್ಥೆ’ಯ ಸ್ಥಾಪಕಿ ಗೀತಾ ಭಟ್ ಮತ್ತು ಕಲಾವಿದ, ಕಲಾಶಿಕ್ಷಕ ಸುನಿಲ್ ಮಿಶ್ರಾ ಶಿರ್ವ ಇದ್ದರು.

50ಕ್ಕೂ ಹೆಚ್ಚು ಕಲಾಸಕ್ತರು ಶಿಬಿರದಲ್ಲಿ ಭಾಗವಹಿಸಿದ್ದರು.

ಮಂಜೂಷಾ ವಸ್ತು ಸಂಗ್ರಹಾಲಯದ ಪುಷ್ಪದಂತ ಹೆಗ್ಡೆ, ರಿತೇಶ್ ಶರ್ಮಾ, ಚೈತ್ರಾ ರಾವ್, ಸುಭಾಶ್ ಜೈನ್, ರಾಜೇಶ್ ದೇವಾಡಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.