ADVERTISEMENT

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:37 IST
Last Updated 4 ಜುಲೈ 2025, 5:37 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಳ್ತಂಗಡಿ: ವೇಣೂರಿನ ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ಬಳಿ ಹಳ್ಳಕ್ಕೆ ಇಳಿದ ವ್ಯಕ್ತಿಯೊಬ್ಬರು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಗುರುವಾರ ಮೃತಪಟ್ಟಿದ್ದಾರೆ.

ADVERTISEMENT

ಸ್ಥಳೀಯ ನಿವಾಸಿ ವೀರಪ್ಪ (74) ಮೃತರು. ವಿದ್ಯುತ್ ಪರಿವರ್ತಕದ ಸಮೀಪ ತೋಟದಲ್ಲಿ ಹಾದು ಹೋಗಿದ್ದ ಲೋ ಟೆನ್ಷನ್ ವಿದ್ಯುತ್ ಮಾರ್ಗದ ಮೇಲೆ ತೆಂಗಿನ ಗರಿ ಬಿದ್ದು, ತಂತಿಯು ತುoಡಾಗಿ ನೀರು ಹರಿಯುವ ಹಳ್ಳಕ್ಕೆ ಬಿದ್ದಿತ್ತು.  ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತಿದ್ದ ವೀರಪ್ಪ, ಹಳ್ಳದ ನೀರಿನಲ್ಲಿ ತೇಲಿ ಹೋಗುತ್ತಿದ್ದ ಅಡಕೆ, ತೆಂಗಿನಕಾಯಿಯನ್ನು ಹೆಕ್ಕಲು ನೀರಿಗೆ ಇಳಿದಿದ್ದರು. ಅಲ್ಲಿಯೇ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬಳ್ಳಿ ಎಂದು ಬರಿ ಕೈಯಲ್ಲಿ ಹಿಡಿದು ಎಳೆದಾಗ, ವಿದ್ಯುತ್ ತಂತಿಯು ಕಂಬದಲ್ಲಿರುವ ಇನ್ನೊಂದು ತಂತಿಗೆ ತಾಗಿ, ಅವರಿಗೆ ವಿದ್ಯುತ್ ಆಘಾತವಾಗಿತ್ತು. ಇದರಿಂದ ಅವರು ಮೃತ ಪಟ್ಟಿರುವ ಸಾಧ್ಯತೆ ಇದೆ ಎಂದು ಮೆಸ್ಕಾಂ ತಿಳಿಸಿದೆ.

ವೇಣೂರು ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.