ADVERTISEMENT

ನಾಟಾ ಪರೀಕ್ಷೆ: ಎಕ್ಸ್‌ಪರ್ಟ್‌ನ ಸಾಧನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 16:00 IST
Last Updated 31 ಅಕ್ಟೋಬರ್ 2020, 16:00 IST
ಬ್ರಿಜ್ವಿನ್ ಬಾಲಕೃಷ್ಣ
ಬ್ರಿಜ್ವಿನ್ ಬಾಲಕೃಷ್ಣ   

ಮಂಗಳೂರು: ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್‍ಎಟಿಎ-ನಾಟಾ) ಪ್ರವೇಶ ಪರೀಕ್ಷೆ ಬರೆದ ನಗರದ ವಳಚ್ಚಿಲ್ ಹಾಗೂ ಕೊಡಿಯಾಲ್‌ಬೈಲ್‌ನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಬ್ರಿಜ್ವಿನ್ ಬಾಲಕೃಷ್ಣ 43, ಸ್ಮಿತಾ ಶಾಂತಾರಾಮ ಭಟ್ 91, ಬಿಮಲ್ ಸಾಗರ್ ಎಚ್.ಕೆ. 187, ಲೆಹರ್ ಪಿ. 203, ಸಾತ್ವಿಕ್ ಕೆ. 219, ಮನು ಸಾಗರ್ ಡಿ. 329, ರಿಯಾ ಎಸ್. ಮಾನೆ 355, ಪೂಜಾ ಧರ್ಮಾಸ 445, ಅರುಣ್ ಎನ್. ಕಂಬಳಿ 599, ಪೂಜಾ ಪಿ.ಜೆ. 628, ಲಿಖಿತ್ ಗೌಡ ಎನ್. 666, ಶಿವಾನಿ ದೇವಾನಂದ ಬಿಜೈ 688, ನಿತಿನ್ ಎಸ್.ಎಸ್. 702, ಸಾಗರಿಕ ಜೀರಂಕಲಿ 955, ಸಿ.ಎನ್.ಹೇಮಂತ್ 1062, ನಿರೀಕ್ಷಾ ಡಿ. 1121, ಪ್ರಥಮ್ ಜೋಶಿ 1514, ಪ್ರಕೃತಿ ಕೆ. 1695, ಮಂದೀಪ್ ಡೊಂಗ್ರೆ 1879ನೇ ರ‍್ಯಾಂಕ್‌ ಪಡೆದಿದ್ದಾರೆ.

ಸ್ಪರ್ಧಾತ್ಮಕ ಯುಗದಲ್ಲಿ ಆರ್ಕಿಟೆಕ್ಚರ್ ವಿಭಾಗವು ಪ್ರಾಮುಖ್ಯತೆ ಪಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಒದಗಲಿರುವ ಹಿನ್ನೆಲೆಯಲ್ಲಿ ಈ ಕೋರ್ಸ್‌ಗೆ ಆದ್ಯತೆ ನೀಡಲಾಗುತ್ತಿದೆ. ಈ ಕೋರ್ಸ್‌ನ ಪ್ರವೇಶಕ್ಕೆ ನಾಟಾ ಪರೀಕ್ಷೆಯ ಫಲಿತಾಂಶವೇ ಮಾನದಂಡವಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.