ADVERTISEMENT

ಫ್ರಾನ್ಸಿಸ್ಕೊ ಸಾರ್ಡಿನ್ಹಾರಿಗೆ ಆತ್ಮೀಯ ಸನ್ಮಾನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:08 IST
Last Updated 4 ಅಕ್ಟೋಬರ್ 2022, 6:08 IST
ಫ್ರಾನ್ಸಿಸ್ಕೊ ಸಾರ್ಡಿನ್ಹಾ ಅವರನ್ನು ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಪರವಾಗಿ ಬಿಷಪರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಫ್ರಾನ್ಸಿಸ್ಕೊ ಸಾರ್ಡಿನ್ಹಾ ಅವರನ್ನು ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಪರವಾಗಿ ಬಿಷಪರ ನಿವಾಸದಲ್ಲಿ ಸನ್ಮಾನಿಸಲಾಯಿತು.   

ಮಂಗಳೂರು: ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಫ್ರಾನ್ಸಿಸ್ಕೊ ಸಾರ್ಡಿನ್ಹಾ ಅವರಿಗೆ ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಪರವಾಗಿ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಬಿಷಪರ ನಿವಾಸದಲ್ಲಿ ಸನ್ಮಾನಿಸಿದರು.

ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸ್ಟ್ಯಾನಿ ಲೋಬೊ ಸ್ವಾಗತಿಸಿದರು. ಫ್ರಾನ್ಸಿಸ್ಕೊ ಸಾರ್ಡಿನ್ಹಾ ಅವರ ಜನಪರ ಸೇವೆಯನ್ನು ಸ್ಮರಿಸಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡ ಸಾರ್ಡಿನ್ಹಾ ಅವರು ಗೋವೆಯ ಕುರ್ಟೊರಿಂ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದವರು ಎಂದರು. ಕಥೋಲಿಕ್ ಸಭೆಯ ಮಾಸಿಕ ಪತ್ರಿಕೆ ‘ಆಮ್ಚೊ ಸಂದೇಶ್’ ಇದರ ರಾಷ್ಟ್ರೀಯ ನೋಂದಣಿಯ ಪರವಾನಗಿಯನ್ನು ನವೀಕರಿಸುವಲ್ಲಿ ಮಾಡಿದ ಸಹಾಯಕ್ಕಾಗಿ ಫ್ರಾನ್ಸಿಸ್ಕೊ ಅವರಿಗೆ ಧನ್ಯವಾದ ಸಲ್ಲಿಸಿದರು.

ಕಥೋಲಿಕ್ ಸಭಾ ಕೇಂದ್ರೀಯ ಆಧ್ಯಾತ್ಮಿಕ ನಿರ್ದೇಶಕ ಜೆ.ಬಿ. ಸಲ್ಡಾನ್ಹ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೊ, ‘ಆಮ್ಚೊ ಸಂದೇಶ್’ ಪತ್ರಿಕೆಯ ಸಂಪಾದಕ ವಿಲ್‍ಫ್ರೆಡ್ ಲೋಬೊ, ಭಾರತೀಯ ಸಣ್ಣ ಉದ್ಯಮಿಗಳ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಡೊಲ್ಫಿ ಪ್ರಶಾಂತ್ ಡಿಸೋಜ, ಕಥೋಲಿಕ್ ಸಭಾದ ಪ್ರಧಾನ ಕಾರ್ಯದರ್ಶಿ ನೊರಿನ್ ಪಿಂಟೊ, ಖಜಾಂಚಿ ಆಲ್ಫೋನ್ ಫರ್ನಾಂಡಿಸ್, ಸಹ ಕಾರ್ಯದರ್ಶಿ ಲವಿನಾ ಡಿಸೋಜ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.