ADVERTISEMENT

ಕನ್ನಡ ಭಾಷೆಯ ರಕ್ಷಣೆಗೆ ಹೋರಾಟ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 16:02 IST
Last Updated 1 ನವೆಂಬರ್ 2019, 16:02 IST
ಮೀಪುಗುರಿಯಲ್ಲಿರುವ  ಕನ್ನಡಗ್ರಾಮದಲ್ಲಿ ಶುಕ್ರವಾರ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು
ಮೀಪುಗುರಿಯಲ್ಲಿರುವ  ಕನ್ನಡಗ್ರಾಮದಲ್ಲಿ ಶುಕ್ರವಾರ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು   

ಬದಿಯಡ್ಕ: ‘ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಅನೇಕ ಸೌಲಭ್ಯಗಳಿದ್ದರೂ, ಕೇರಳ ಸರ್ಕಾರ ಅವುಗಳನ್ನು ನೀಡದೆ ಸತಾಯಿಸುತ್ತಿದೆ. ಕನ್ನಡ ಭಾಷೆಯ ರಕ್ಷಣೆಯ ಜತೆಗೆ ಈ ಸವಲತ್ತುಗಳನ್ನು ಪಡೆಯಲು ಹೋರಾಟ ಅನಿವಾರ್ಯವಾಗಿದೆ’ ಎಂದು ಹಿರಿಯ ಕನ್ನಡ ಹೋರಾಟಗಾರ ರಘು ಮೀಪುಗುರಿ ಹೇಳಿದರು

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಶುಕ್ರವಾರ ಮೀಪುಗುರಿಯಲ್ಲಿರುವ ಕನ್ನಡಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕಾಸರಗೋಡಿನಲ್ಲಿ ಕನ್ನಡದ ಶಕ್ತಿ ಕುಂದುತ್ತಿದ್ದು, ಕನ್ನಡಿಗ ಯುವಜಜನರು ಕನ್ನಡ ಕಟ್ಟುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಗುರುಪ್ರಸಾದ ಕೋಟೆಕಣಿ, ವಿನೋದ್‌ ಮಾಸ್ತರ್, ಸತ್ಯನಾರಾಯಣ ಕಾಸರಗೋಡು ಇದ್ದರು. ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯ ಕುಶಲ ವಂದಿಸಿದರು. ದಿವಾಕರ ಅಶೋಕ ನಗರ ಕನ್ನಡ ಪ್ರತಿಜ್ಞೆ ಬೋಧಿಸಿದರು. ನಂತರ ಜಯಾನಂದ ಕುಮಾರ್, ಕೃಪಾನಿಧಿ, ದಿವಾಕರ ಅಶೋಕನಗರ, ಕಾವ್ಯ ಕುಶಲ ಅವರಿಂದ ಕನ್ನಡ ಕಾವ್ಯ ಗಾಯನ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.