ADVERTISEMENT

ಕುಕ್ಕೆ ಕ್ಷೇತ್ರದಲ್ಲಿ ಹೃದಯ ಸಮ್ಮೇಳನ

ನಾಳೆಯಿಂದ ಮೂರು ದಿನ ಕಾರ್ಯಕ್ರಮ: ಸಂತರ ಸಮಾಗಮ; ಧ್ಯಾನ, ಸತ್ಸಂಗ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 12:31 IST
Last Updated 25 ಡಿಸೆಂಬರ್ 2024, 12:31 IST
ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ನ ಕಾರ್ಯದಶರ್ಿ ಸತೀಶ್ಜಿ (ಸತ್ಯನಾರಾಯಣ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ನ ಕಾರ್ಯದಶರ್ಿ ಸತೀಶ್ಜಿ (ಸತ್ಯನಾರಾಯಣ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಸುಬ್ರಹ್ಮಣ್ಯ: ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಟ್ರಸ್ಟ್ ಆಶ್ರಯದಲ್ಲಿ ವಿಶ್ವ ಹೃದಯ ಸಮ್ಮೇಳನ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ಇದೇ 27ರಿಂದ ಮೂರು ದಿನ ನಡೆಯಲಿದೆ. ಸಂತರಿಂದ ಆಶೀರ್ವಚನ, ಸಂಸ್ಥಾನ ಪೂಜೆ, ಗುರುಪೂಜೆ, ಭಜನೆ, ಧ್ಯಾನ, ಸತ್ಸಂಗ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದು ಟ್ರಸ್ಟ್‌ ಕಾರ್ಯದರ್ಶಿ ಸತೀಶ್‌ (ಸತ್ಯನಾರಾಯಣ) ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಋಷಿ ಸಂಸ್ಕೃತಿ ವಿದ್ಯಾಕೇಂದ್ರದಿಂದ ಸಿದ್ಧಿ ಯೋಗ ಮಾಡಿದ ಸ್ವಯಂಸೇವಕರು ಕೇಂದ್ರದ ಮಂಗಳೂರು ಶಾಖೆಯಿಂದ ಇದೇ 24ರಂದು ಪಾದಯಾತ್ರೆ ಆರಂಭಿಸಿದ್ದು ಬುಧವಾರ ಸುಬ್ರಹ್ಮಣ್ಯಕ್ಕೆ ತಲುಪಿದ್ದಾರೆ. ಮಾನಸಿಕ ನೆಮ್ಮದಿ, ಪರಿಸರ ಅಧ್ಯಯನ ಮತ್ತು ಆರೋಗ್ಯ ಸಮೃದ್ಧಿಯ ಆಶಯದೊಂದಿಗೆ ನಡೆದ ಪಾದಯಾತ್ರೆಯಲ್ಲಿ 100 ಮಂದಿ ಪಾಲ್ಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸರ್ವಧರ್ಮ ಸಮಭಾವ ಎಂಬ ಧ್ಯೇಯವ್ಯಾಕ್ಯದೊಂದಿಗೆ ಸಮ್ಮೇಳನ ನಡೆಯಲಿದ್ದು ಅಧ್ಯಾತ್ಮ ಚಿಂತನೆ ಮತ್ತು ಪ್ರಗತಿಯ ಗುರಿಯನ್ನು ಹೊಂದಿದೆ. ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಸತೀಶ್ ತಿಳಿಸಿದರು.

ADVERTISEMENT

27ರಂದು ಉದ್ಘಾಟನಾ ಸಮಾರಂಭದಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಹೊಸದುರ್ಗ ಸದ್ಗುರು ಸೇವಾಶ್ರಮದ ಶ್ರೀಕಂಠಾನಂದ ಸರಸ್ವತಿ ಮಹರಾಜ್, ಶಿವಮೊಗ್ಗದ ಸದ್ಗುರು ಶ್ರೀಸತ್ ಉಪಾಸಿ ದಿವ್ಯಾಶ್ರಮದ ಬ್ರಹ್ಮಾನಂದತೀರ್ಥ ಬಿಕ್ಷು, ಹಿರಿಯೂರು ಶ್ರೀ ದತ್ತಾಶ್ರಮದ ಸುಬೊಧಾನಂದ ಸ್ವಾಮೀಜಿ, ಬೆಂಗಳೂರು ಲಲಿತ ಮಂದಿರದ ಶ್ರೀಕಂಠ ಗುರೂಜಿ ಆಶೀರ್ವಚನ ನೀಡಲಿದ್ದಾರೆ. ದೊಡ್ಡಮರಳವಾಡಿಯ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಋಷಿ ತಪೋಕ್ಷೇತ್ರದ ಧರ್ಮಾಧಿಕಾರಿ ಪಿ.ಜಿ.ಆರ್.ಸಿಂಧ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯೀಸ ಮುಖ್ಯ ಅತಿಥಿಗಳಾಗಿರುವರು. ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನವಿದೆ ಎಂದರು.

28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಹಾಸನದ ಪ್ರವೀಣ್ ಗುರೂಜಿ, ಬೆಂಗಳೂರಿನ ಶ್ರೀಕಂಠೇಶ್ವರ ಗುರೂಜಿ, ಚಲನಚಿತ್ರ ನಟ ಶ್ರೀಧರ್ ಭಾಗವಹಿಸಲಿದ್ದಾರೆ. ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸ ಅಧ್ಯಕ್ಷತೆ ವಹಿಸುವರು. ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ರಾಧಾಕೃಷ್ಣ ನೃತ್ಯ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. 29ರಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಸಂಸ್ಥಾನ ಪೂಜೆ ನೆರವೇರಲಿದೆ. ಶಿವಮೊಗ್ಗದ ಬಾಲಜ್ಞಾನಿ ಶಾಮಶಂಕರ್ ಭಟ್ಟ ಭಾಗವಹಿಸಲಿದ್ದಾರೆ. ಕಲಾವಿದ ಕೆ.ಯಜ್ಞೇಶ್ ಆಚಾರ್ ಮತ್ತು ಬಳಗದಿಂದ ದಾಸವಾಣಿ ನಡೆಯಲಿದೆ ಎಂದು ಅವರು ವಿವರಿಸಿದರು.

ವಿವಿಧ ರಾಜ್ಯ ಮತ್ತು ದೇಶಗಳಲ್ಲಿ ವಿಶ್ವ ಹೃದಯ ಸಮ್ಮೇಳನ ನಡೆದಿದೆ ಎಂದು ಅವರು ಹೇಳಿದರು. ಮುರಳಿಕೃಷ್ಣ ಕಾಮತ್ ಸುಬ್ರಹ್ಮಣ್ಯ, ಚಂದ್ರಶೇಖರ ನಾಯರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.