ADVERTISEMENT

ಸುಳ್ಯದಲ್ಲಿ ಮತ್ತೆ ಲಘು ಭೂಕಂಪನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:56 IST
Last Updated 1 ಜುಲೈ 2022, 2:56 IST
   

ಸುಳ್ಯ: ಇಲ್ಲಿನ ತಾಲ್ಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದೆ. ಮಧ್ಯ ರಾತ್ರಿ ಉಂಟಾದ ಭೀಕರ ಶಬ್ದ ಮತ್ತು ಕಂಪನದಿಂದ ಜನತೆ ನಲುಗಿ ಎಚ್ಚರಗೊಂಡಿದ್ದಾರೆ.

ರಾತ್ರಿ 1.15 ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ತಮ್ಮ ಅನುಭವ ಹಂಚಿ ಕೊಂಡಿದ್ದಾರೆ. ಸಂಪಾಜೆ ಹಾಗು ಸಮೀಪದ ಪ್ರದೇಶ, ಸುಳ್ಯ ಪಟ್ಟಣ ಸೇರಿ ಸುಳ್ಯ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭೂ ಕಂಪನದ ಆಗಿರುವ ಬಗ್ಗೆ ಜನರು ದೂರವಾಣಿಯ ಮೂಲಕ ಹಾಗು ಸಾಮಾಜಿಕ ಜಾಲತಾಣಗಳ ಮೂಲಕ ಅನುಭವ ಹಂಚಿ ಕೊಂಡಿದ್ದಾರೆ. ಇದೀಗ ವಾರದಲ್ಲಿ ನಾಲ್ಕನೇ ಬಾರಿ ಭೂ ಕಂಪನ ಉಂಟಾಗಿದ್ದು ಜನರ ಆತಂಕ ಹೆಚ್ಚಿದೆ. ಜೂ.25 ರಂದು ಬೆಳಿಗ್ಗೆ 9.10 ಕ್ಕೆ 2.3 ತೀವ್ರತೆಯ ಭೂ ಕಂಪನ ಆಗಿತ್ತು. ಜೂ.28 ರಂದು ಎರಡು ಬಾರಿ ಭೂಮಿ ನಲುಗಿತ್ತು. ಬೆಳಿಗ್ಗೆ ರಿಕ್ಟರ್ ಸ್ಕೇಲ್‌ನಲ್ಲಿ 3 ತೀವ್ರತೆಯ ಹಾಗು ಸಂಜೆ 1.8 ತೀವ್ರತೆಯ ಕಂಪನ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT