ADVERTISEMENT

ಜಾಂಬೂರಿ: ಮಲ್ಲಕಂಬ ತರಬೇತಿ ಆರಂಭ

5 ದಿನಗಳ ಶಿಬಿರದಲ್ಲಿ 250 ಮಲ್ಲಕಂಬ ಪಟುಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 5:29 IST
Last Updated 17 ಡಿಸೆಂಬರ್ 2022, 5:29 IST
ಮಲ್ಲಕಂಬ ತರಬೇತಿ ಶಿಬಿರಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಚಾಲನೆ ನೀಡಿದರು. ಪ್ರೊ.ಕುರಿಯನ್, ಸಿ.ಕೆ ಚನಾಳ್ ಇದ್ದಾರೆ
ಮಲ್ಲಕಂಬ ತರಬೇತಿ ಶಿಬಿರಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಚಾಲನೆ ನೀಡಿದರು. ಪ್ರೊ.ಕುರಿಯನ್, ಸಿ.ಕೆ ಚನಾಳ್ ಇದ್ದಾರೆ   

ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಪ್ರಯುಕ್ತ ರಾಜ್ಯ ಮಟ್ಟದ ಮಲ್ಲಕಂಬ ತರಬೇತಿ ಶಿಬಿರಕ್ಕೆ ವಿದ್ಯಾಗಿರಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಮಲ್ಲಕಂಬ ಗ್ರಾಮೀಣ ಕ್ರೀಡೆಯಾಗಿದ್ದು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು. ಆಳ್ವಾಸ್ ಸಂಸ್ಥೆ ಶಿಕ್ಷಣಕ್ಕೆ ಒತ್ತು ನೀಡುವುದರ ಜತೆಗೆ ಗ್ರಾಮೀಣ ಕ್ರೀಡೆ, ಕಲೆ, ಸಂಸ್ಕೃತಿಗೂ ಹೆಚ್ಚಿನ ಮಹತ್ವವನ್ನು ನೀಡಿ ಅದಕ್ಕೆ ವೇದಿಕೆಯನ್ನು ನೀಡುತ್ತಾ ಬಂದಿದೆ ಎಂದರು.

5 ದಿನಗಳ ತರಬೇತಿಯಲ್ಲಿ ಬಾಗಲಕೋಟೆ, ಬೆಳಗಾವಿ, ಧಾರ ವಾಡ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ 250 ಮಲ್ಲಕಂಬ ಪಟುಗಳು ಭಾಗವಹಿಸಲಿದ್ದಾರೆ. ತರಬೇತಿ ಪಡೆದವರು ಜಾಂಬೂರಿಯ ಸಂದರ್ಭ ವಿಶೇಷ ಮಲ್ಲಕಂಬ ಪ್ರದರ್ಶನ ನೀಡಲಿದ್ದಾರೆ. ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್, ತರಬೇತುದಾರ ಸಿ.ಕೆ. ಚನಾಳ್, ಬಸವರಾಜ್ ಇದ್ದರು. ಶ್ರೀನಿಧಿ ಎಳಚಿತ್ತಾಯ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.