ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿ ಪೊಲೀಸರು ವಿನಾಕಾರಣ ಮಧ್ಯ ರಾತ್ರಿ ಬಳಿಕ ಮನೆಗೆ ತೆರಳಿ ಕಿರುಕುಳ ನೀಡಿದ್ದಾರೆ ಎಂದು ಶಾಸಕ ಡಾ.ವೈ,ಭರತ್ ಶೆಟ್ಟಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ಆಯೋಗದ ತಂಡವು ಈ ಬಗ್ಗೆ ವಿಚಾರಣೆ ಆರಂಭಿಸಿದೆ.
ಭರತ್ ಶೆಟ್ಟಿ ಅವರನ್ನು ಮಂಗಳವಾರ ಭೇಟಿಯಾದ ಆಯೋಗದ ತಂಡದವರು ಈ ದೂರಿನ ಬಗ್ಗೆ ಹೆಚ್ಚುವರಿ ಮಾಹಿತಿ ಪಡೆದರು. ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದ್ದವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಪೊಲೀಸರು ಮಾನಸಿಕವಾಗಿ ಕಿರುಕುಳ ನೀಡಿದ ಕುರಿತು ಶಾಸಕರು ವಿವರ ನೀಡಿದರು ಎಂದು ಗೊತ್ತಾಗಿದೆ.
ಆಯೋಗದ ತಂಡವು ಇನ್ನಷ್ಟು ಮಂದಿಯನ್ನು ಭೇಟಿಯಾಗಿ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.