ADVERTISEMENT

ಕಡಬ: ದಾಖಲಾತಿ ಕೊರತೆ: ಶಾಲೆ ಬಂದ್

ಇಚ್ಲಂಪಾಡಿ ಸಮೀಪದ ಕೊರಮೇರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:41 IST
Last Updated 23 ಜೂನ್ 2022, 2:41 IST
ಕಡಬ ತಾಲ್ಲೂಕಿನ ಇಚ್ಲಂಪಾಡಿ ಸಮೀಪದ ಕೊರಮೇರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಡಬ ತಾಲ್ಲೂಕಿನ ಇಚ್ಲಂಪಾಡಿ ಸಮೀಪದ ಕೊರಮೇರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಕಡಬ: ತಾಲ್ಲೂಕಿನ ಇಚ್ಲಂಪಾಡಿ ಸಮೀಪದ ಕೊರಮೇರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದಾಖಲಾತಿ ಕೊರತೆಯಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

‘ಈ ಶೈಕ್ಷಣಿಕ ವರ್ಷದಲ್ಲಿ 3 ಮಕ್ಕಳು ಮಾತ್ರ ದಾಖಲಾತಿ ಆಗಿದ್ದು, ಅವರನ್ನು ಹತ್ತಿರದ ಶಾಲೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿಗಳ ಕೊರತೆ ಕಾರಣದಿಂದ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ವಿದ್ಯಾರ್ಥಿಗಳ ದಾಖಲಾತಿ ಆದರೆ ಶಾಲೆಯನ್ನು ಮರು ಪ್ರಾರಂಭಿಸಲಾಗುವುದು’ ಎಂದು ಕಡಬ ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.

‘ಸುಮಾರು 38 ವರ್ಷಗಳಿಂದ ಶಾಲೆ ಇದೆ. ಸ್ಥಳೀಯವಾಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಹೆಚ್ಚಾಗಿದ್ದು, ಈ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಾ ಬಂದು ಶಾಲೆಯೇ ಮುಚ್ಚುವಂತಾಯಿತು. ಹೀಗಾಗಬಾರದಿತ್ತು. ಶಾಲೆಯನ್ನು ಉಳಿಸುವ ಆಗಬೇಕಾಗಿದೆ ಎಂದು ಸ್ಥಳೀಯರಾದ ಕೇಶವ ಗೌಡ ಕೊರಮೇರು ತಿಳಿಸಿದ್ದಾರೆ.

ADVERTISEMENT

ಇಲ್ಲಿ 1ರಿಂದ 5ರ ವರೆಗೆ ತರಗತಿಗಳಿದ್ದು, ಇಲ್ಲಿದ್ದ ಒಬ್ಬರು ಶಿಕ್ಷಕರನ್ನು ಬೇರೆಡೆ ನಿಯೋಜಿಸಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 9 ಅನುದಾನ ರಹಿತ ಸೇರಿದಂತೆ ಒಟ್ಟು 14 ಶಾಲೆಗಳು ಮುಚ್ಚಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.