ADVERTISEMENT

ಕಾಲಿನಲ್ಲೇ ಪಿಯುಸಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಪಡೆದ ಕೌಶಿಕ್‌ಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 3:40 IST
Last Updated 14 ಜುಲೈ 2022, 3:40 IST
ಕಾಲಿನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಗಳಿಸಿದ ಬಂಟ್ವಾಳ ಕಂಚಿಕಾರ ಪೇಟೆಯ ಕೌಶಿಕ್ ಆಚಾರ್ಯ ಅವರನ್ನು ಪುತ್ತೂರಿನ ಬೊಳುವಾರು ವಿಶ್ವಕರ್ಮ ಯುವಸಮಾಜ ಮತ್ತು ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು
ಕಾಲಿನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಗಳಿಸಿದ ಬಂಟ್ವಾಳ ಕಂಚಿಕಾರ ಪೇಟೆಯ ಕೌಶಿಕ್ ಆಚಾರ್ಯ ಅವರನ್ನು ಪುತ್ತೂರಿನ ಬೊಳುವಾರು ವಿಶ್ವಕರ್ಮ ಯುವಸಮಾಜ ಮತ್ತು ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು   

ಪುತ್ತೂರು: ಕಾಲಿನಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಗಳಿಸಿದ ಬಂಟ್ವಾಳ ಕಂಚಿಕಾರ ಪೇಟೆಯ ಕೌಶಿಕ್ ಆಚಾರ್ಯ ಅವರನ್ನು ಪುತ್ತೂರಿನ ಬೊಳುವಾರು ವಿಶ್ವಕರ್ಮ ಯುವ ಸಮಾಜ ಮತ್ತು ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಭಾನುವಾರ ನಡೆದ ವಿಶ್ವಕರ್ಮ ಯುವ ಸಮಾಜ ಮತ್ತು ವಿಶ್ವಬ್ರಾಹ್ಮಣ ಸೇವಾ ಸಂಘದ ಮಹಾಸಭೆಯಲ್ಲಿ ಅವರನ್ನು ಗೌರವಿಸಲಾಯಿತು. ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪುತ್ತೂರು ವಿಶ್ವಕರ್ಮ ಸಮಾಜದ ಶಿಕ್ಷಕರು ಮತ್ತು ಸಮಾಜದವರು ₹ 20 ಸಾವಿರ ಸಂಗ್ರಹಿಸಿ ಹಸ್ತಾಂತರಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರಣವ್ ಎ ಹಾಗೂ ಕ್ರೀಡಾಪಟು ಪ್ರತಿಜ್ಞಾ ಬಿ ಅವರನ್ನೂ ಅಭಿನಂದಿಸಲಾಯಿತು.

ಎಸ್.ಕೆಜಿಐ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.