ADVERTISEMENT

ಕೊಡಿಮರ-ಬಿಂಬಮರಗಳ ಸಮರ್ಪಣಾ ಮೆರವಣಿಗೆ

ದೇಯಿಬೈದೆತಿ,ಕೋಟಿ-ಚೆನ್ನಯರ ಗೆಜ್ಜೆಗಿರಿ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 13:42 IST
Last Updated 9 ಡಿಸೆಂಬರ್ 2018, 13:42 IST
ತುಳುನಾಡಿನ ಇತಿಹಾಸ ಪ್ರಸಿದ್ಧ ಅವಳಿ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಹಾಗೂ ಅವರ ತಾಯಿ ದೈವಾಂಶ ಸಂಭೂತೆಯಾದ ದೇಯಿ ಬೈದೆತಿಯ ಮೂಲಸ್ಥಾನವಾದ ಪುತ್ತೂರು ತಾಲ್ಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದಲ್ಲಿರುವ ಧೂಮಾವತಿ ಸನ್ನಿಧಿಗೆ ಕೊಡಿಮರ ಮತ್ತು ಕೋಟಿ-ಚೆನ್ನಯ, ದೇಯಿಬೈದೆತಿ ಹಾಗೂ ಗುರು ಸಾಯನ ಬೈದರ ಮೂರ್ತಿ ಕೆತ್ತನೆಗಾಗಿ ಬಿಂಬ ಮರಗಳ ಸಮರ್ಪಣಾ ಮೆರವಣಿಗೆ ಭಾನುವಾರ ನಡೆಯಿತು.
ತುಳುನಾಡಿನ ಇತಿಹಾಸ ಪ್ರಸಿದ್ಧ ಅವಳಿ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಹಾಗೂ ಅವರ ತಾಯಿ ದೈವಾಂಶ ಸಂಭೂತೆಯಾದ ದೇಯಿ ಬೈದೆತಿಯ ಮೂಲಸ್ಥಾನವಾದ ಪುತ್ತೂರು ತಾಲ್ಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದಲ್ಲಿರುವ ಧೂಮಾವತಿ ಸನ್ನಿಧಿಗೆ ಕೊಡಿಮರ ಮತ್ತು ಕೋಟಿ-ಚೆನ್ನಯ, ದೇಯಿಬೈದೆತಿ ಹಾಗೂ ಗುರು ಸಾಯನ ಬೈದರ ಮೂರ್ತಿ ಕೆತ್ತನೆಗಾಗಿ ಬಿಂಬ ಮರಗಳ ಸಮರ್ಪಣಾ ಮೆರವಣಿಗೆ ಭಾನುವಾರ ನಡೆಯಿತು.   

ಪುತ್ತೂರು: ತುಳುನಾಡಿನ ಕಾರಣಿಕ ಪುರುಷರಾದ ಕೋಟಿ-ಚೆನ್ನಯರು ಹಾಗೂ ಅವರ ತಾಯಿ ದೈವಾಂಶ ಸಂಭೂತೆದೇಯಿ ಬೈದೆತಿಯ ಮೂಲಸ್ಥಾನವಾದ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದಲ್ಲಿರುವ ಧೂಮಾವತಿ ಸನ್ನಿಧಿಗೆ ಕೊಡಿಮರ ಮತ್ತು ಕೋಟಿ-ಚೆನ್ನಯ, ದೇಯಿಬೈದೆತಿ ಹಾಗೂ ಗುರು ಸಾಯನ ಬೈದರ ಮೂರ್ತಿ ಕೆತ್ತನೆಗಾಗಿ ಬಿಂಬ ಮರಗಳ ಸಮರ್ಪಣಾ ಮೆರವಣಿಗೆ ಭಾನುವಾರ ನಡೆಯಿತು.

ಸುಳ್ಯ ತಾಲ್ಲೂಕಿನ ಉಬರಡ್ಕ ಗ್ರಾಮದ ನೈಯೋಡಿ ಎಂಬಲ್ಲಿಂದ ಶನಿವಾರ ಬಿಂಬ ಮರವನ್ನು ಮೆರವಣಿಗೆಯ ಮೂಲಕ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಗೆ ತರಲಾಗಿತ್ತು. ಕೊಳ್ತಿಗೆ ಗ್ರಾಮದ ಚೀಮುಳ್ಳುಗುಂಡಿ ಸಮೀಪದ ಓಕರ್ೊಂಬು ಎಂಬಲ್ಲಿಂದ ಕೊಡಿಮರವನ್ನು ಪೆರ್ಲಂಪಾಡಿಗೆ ತಂದು ಶನಿವಾರ ರಾತ್ರಿ ಈ ಎರಡೂ ಮರಗಳನ್ನು ಒಟ್ಟಿಗೆ ಇರಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಈ ಎರಡು ಮರಗಳನ್ನು ಅಲಂಕರಿಸಿ ಒಂದೇ ಟ್ರಕ್ನಲ್ಲಿರಿಸಿ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಜಂಕ್ಷನ್ಗೆ ತರಲಾಯಿತು.

ಬಳಿಕ ಕೌಡಿಚ್ಚಾರಿನಿಂದ ಮೆರವಣಿಗೆ ಮೂಲಕ ಗೆಜ್ಜೆಗಿರಿ ಕ್ಷೇತ್ರಕ್ಕೆ ಸಾಗಿಸಿ,ಕ್ಷೇತ್ರಕ್ಕೆ ಸಮಪರ್ಿಸಲಾಯಿತು.

ADVERTISEMENT

ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಕೌಡಿಚ್ಚಾರಿನಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಕೋಟಿ-ಚೆನ್ನಯ, ದೇಯಿ ಬೈದತಿ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಸ್ವಾಗತಿಸಿದರು.

ಕ್ಷೇತ್ರಾಡಳಿತ ಸಮಿತಿಯ ಕಾರ್ಯದಶರ್ಿ ಸುಧಾಕರ್ ತಿಂಗಳಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೋಟಿ ಚೆನ್ನಯರು 500 ವರ್ಷಗಳ ಹಿಂದೆ ಗೆಜ್ಜೆಗಿರಿಯಲ್ಲಿ ಹುಟ್ಟಿ ಬೆಳೆದು ಕಾರಣಿಕ ಮೆರೆದಿರುವುದು, ಅಲ್ಲಿಂದ ಮುಂದೆ ನ್ಯಾಯ-ಧರ್ಮ ರಕ್ಷಣೆಯ ಉದ್ದೇಶದಿಂದ ಗುರು ಸಾಯನಬೈದ್ಯರ ಅಪ್ಪಣೆಯಂತೆ ಎಣ್ಮೂರು ಕಡೆಗೆ ಪಯಣ ಬೆಳೆಸಿರುವುದು, ಅವರು ಕೊಳ್ತಿಗೆ ಗ್ರಾಮದ ಚಿಮುಳ್ಳಗುಂಡಿ ಮೂಲಕವಾಗಿ ಎಣ್ಮೂರಿಗೆ ಹೋಗಿರುವುದು ಹಳೆಯ ಇತಿಹಾಸ. ಈ ಇತಿಹಾಸಕ್ಕೆ ಮರು ರೂಪ ಕೊಡುವ ಮೂಲಕ ಹೊಸ ಚರಿತ್ರೆ ನಿರ್ಮಿಸುವಪ್ರಯತ್ನಗಳು ಇದೀಗ ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆದಿದೆ. ಇದಕ್ಕೆ ಪೂರಕ ಎಂಬಂತೆ ಕೋಟಿ ಚೆನ್ನಯರು ತಂಗಿದ್ದ ಚಿಮುಳ್ಳಗುಂಡಿ ಸಮೀಪದ ಓಕರ್ಬು ಎಂಬಲ್ಲಿಂದ ಇದೀಗ ಧ್ವಜ ಮರ ಲಭಿಸಿರುವುದು ಯೋಗ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ಅಧ್ಯಕ್ಷ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಕಕರ್ರ, ಬಿಲ್ಲವ ಮಹಾಮಂಡಲದ ಪ್ರಧಾನ ಕಾರ್ಯದಶರ್ಮೋಹನದಾಸ್ ಕಾವೂರು,ಗೆಜ್ಜೆಗಿರಿ ನಂದನ ಬಿತ್ತಿಲ್ನ ಯಜಮಾನ ಶ್ರೀಧರ ಪೂಜಾರಿ, ಪ್ರಮುಖರಾದ ಪಿತಾಂಭರ ಹೇರಾಜೆ, ಸಂಜೀವ ಪೂಜಾರಿ ಬಿರ್ವ, ರವಿ ಪೂಜಾರಿ ಚಿಲಿಂಬಿ, ಪ್ರಸಾದ್ ಕೌಶಲ್ಯ ಶೆಟ್ಟಿ, ರಾಜಶೇಖರ ಕೋಟ್ಯಾನ್, ಮಹಮ್ಮದ್ ಬಡಗನ್ನೂರು, ಶೈಲೇಂದ್ರ ಪೂಜಾರಿ, ಚಂದ್ರಹಾಸ ಉಚ್ಚಿಲ್, ದೀಪಕ್ ಕೋಟ್ಯಾನ್, ಉಲ್ಲಾಸ್ ಕೋಟ್ಯಾನ್, ಮಹೇಶ್ಚಂದ್ರ ಸಾಲ್ಯಾನ್, ನವೀನ್ ಸುವರ್ಣ, ಕೆ.ಪಿ.ಸಂಜೀವ ರೈ ಮತ್ತಿತರರು ಇದ್ದರು.

ಆಕರ್ಷಕ ಮೆರವಣಿಗೆ: ಕೊಡಿಮರ ಮತ್ತು ಬಿಂಬ ಮರಗಳನ್ನು ಕೌಡಿಚ್ಚಾರಿನಿಂದ 8 ಕಿ.ಮೀ ದೂರದಲ್ಲಿರುವ ಗೆಜ್ಜೆಗಿರಿ ಕ್ಷೇತ್ರಕ್ಕೆ ಆಕರ್ಷಕ ಮೆರವಣಿಗೆ ಮೂಲಕ ಸಾಗಿಸಲಾಯಿತು. ಕೊಳ್ತಿಗೆಯ ಉದಯ ಭಟ್ ಅವರು ನೇತೃತ್ವ ವಹಿಸಿದ್ದರು. ಕೊಡಿಮರ ಮತ್ತು ಬಿಂಬಮರ ಹಾಗೂ ಸಾಗಾಟದ ಟ್ರಕ್ಕನ್ನು ಅಲಂಕರಿಸಲಾಗಿತ್ತು. ಚೆಂಡೆ ವಾದನ, ಕೋಟಿ-ಚೆನ್ನಯರ ಸ್ತಬ್ಧ ಚಿತ್ರ, ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆ ಆಕರ್ಷಕವಾಗಿ ಮೂಡಿಬಂತು. ಪುನರುತ್ಥಾನದ ಹಾದಿಯಲ್ಲಿರುವ ಗೆಜ್ಜೆಗಿರಿ ಕ್ಷೇತ್ರದಲ್ಲಿ ಹೊಸ ಚರಿತ್ರೆ ನಿರ್ಮಾಣವಾಗುತ್ತಿದೆ ಎಂಬುವುದಕ್ಕೆ ಈ ಮೆರವಣಿಗೆ ಸಾಕ್ಷಿಯಾಯಿತು.

ಪಟ್ಟೆಯಲ್ಲಿ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ನೀಡಿ, ಕ್ಷೇತ್ರಕ್ಕೆ ಕೊಡಿಮರ ಮತ್ತು ಬಿಂಬಮರವನ್ನು ಸ್ವಾಗತಿಸಿದರು. 1.15ರ ವೇಳೆಗೆ ಕ್ಷೇತ್ರಕ್ಕೆ ಮೆರವಣಿಗೆ ತಲುಪಿದ್ದು, ಧಾರ್ಮಿಕ ವಿಧಿವಿಧಾನಗಳ ಮೂಲಕ ಕೊಡಿಮರ ಹಾಗೂ ಬಿಂಬ ಮರವನ್ನು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.

ಉಚಿತ ಸೇವೆ; 289ನೇ ಕೊಡಿಮರ: ಈ ಕೊಡಿಮರ ಹಾಗೂ ಬಿಂಬ ಮರದ ಸಾಗಾಟ ಮಾಜಿ ಸಚಿವ ನಾಗರಾಜ್ ಶೆಟ್ಟಿ ಅವರ ಗಣೇಶ್ ಶಿಪ್ಪಿಂಗ್ ಸಂಸ್ಥೆಯ ಟ್ರಕ್ ಮೂಲಕ ನಡೆದಿದ್ದು, ಇದು ಅವರ ಉಚಿತ ಸೇವೆಯಾಗಿತ್ತು. ಗಣೇಶ್ ಶಿಪ್ಪಿಂಗ್ ಸಂಸ್ಥೆಯ ಟ್ರಕ್ನಲ್ಲಿ ಉಚಿತವಾಗಿ ಸಾಗಾಟ ಮಾಡಿದ 289ನೇ ಕೊಡಿಮರ ಇದಾಗಿತ್ತು. ಕೊಳ್ತಿಗೆಯ ಉದಯ ಭಟ್ ಅವರ ನೇತೃತ್ವದಲ್ಲಿ ಸಾಗಾಟವಾದ 54ನೇ ಕೊಡಿಮರ ಮತ್ತು ಬಿಂಬಮರವಾಗಿ ದಾಖಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.