ADVERTISEMENT

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ನಿಧನ

ನಿಧನ ವಾರ್ತೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 20:00 IST
Last Updated 27 ಸೆಪ್ಟೆಂಬರ್ 2020, 20:00 IST
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ   

ವಿಟ್ಲ: ತೆಂಕುತಿಟ್ಟಿನಲ್ಲಿ ‘ತೆಂಕಬೈಲು ಶೈಲಿ’ ಭಾಗವತರು ಎಂದು ಖ್ಯಾತರಾಗಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬಂಟ್ವಾಳ ತಾಲ್ಲೂಕಿನ ತೆಂಕಬೈಲು ಕೃಷ್ಣ ಶಾಸ್ತ್ರಿ ಮತ್ತು ಸಾವಿತ್ರಮ್ಮ ದಂಪತಿ ಪುತ್ರ. ಅವರಿಗೆ ಹವ್ಯಾಸಿ ಭಾಗವತರಾದ ಪುತ್ರ ಮುರಳೀಕೃಷ್ಣ ಹಾಗೂ ಮೂವರು ಪುತ್ರಿಯರು ಇದ್ದಾರೆ.

ಹಾರ್ಮೋನಿಯಂ, ಮದ್ದಳೆ, ಚೆಂಡೆ, ವೇಷಗಳು ಸೇರಿದಂತೆ ಯಕ್ಷಗಾನದ ವಿವಿಧ ಪ್ರಕಾರಗಳಲ್ಲಿ ಸೈ ಎನಿಸಿಕೊಂಡಿದ್ದ ಅವರು, ಹಾಡುಗಾರಿಕೆ ಮೇಲಿನ ಪ್ರೀತಿಯಿಂದ ಭಾಗವತಿಕೆ ಮಾಡುತ್ತಿದ್ದರು. ಸುಮಾರು 25 ವರ್ಷಕ್ಕೂ ಹೆಚ್ಚು ವಿವಿಧ ಮೇಳಗಳಲ್ಲಿ ಭಾಗವತರಾಗಿ ತಿರುಗಾಟ ನಡೆಸಿದ್ದರು. ಹಲವು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.