ಬೆಳ್ತಂಗಡಿ: ‘ಅರಮಲೆಬೆಟ್ಟ ದೈವಸ್ಥಾನದ ಪರಿಸರ ಉತ್ತಮವಾಗಿದ್ದು, ಪ್ರಾಚೀನ ಸಾನ್ನಿಧ್ಯ ಇರುವ ದೈವಸ್ಥಾನವಾಗಿದೆ. ಬ್ರಹ್ಮಕುಂಭಾಭೀಷೇಕದಿಂದ ದೈವದ ಸಾನ್ನಿಧ್ಯ ವೃದ್ಧಿಯಾಗುತ್ತದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕುವೆಟ್ಟು ಗ್ರಾಮದ ಅರಮಲೆಬೆಟ್ಟ ಕೊಡಮಣಿತ್ತಾಯ ದೈವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
‘ಅರಮಲೆಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಉತ್ತಮವಾಗಿ ನಡೆದಿದೆ. ದೈವದ ಶಕ್ತಿಯನ್ನು ಜಾಗೃತಗೊಳಿಸುವ ಕೆಲಸ ಆಡಳಿತ ಮಂಡಳಿ, ಭಕ್ತರು ಮಾಡುತ್ತಿದ್ದಾರೆ. ಇಂಥ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.
ವೀರೇಂದ್ರ ಹೆಗ್ಗಡೆ ಅವರನ್ನು ಕ್ಷೇತ್ರದ ವತಿಯಿಂದ ಅನುವಂಶಿಕ ಆಡಳಿತದಾರ ಸುಕೇಶ್ ಕುಮಾರ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ನವಶಕ್ತಿ, ಸಮಿತಿ ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ವಾತ್ಸಲ್ಯ, ಸುನೀಶ್ ಕುಮಾರ್ ಕಡಂಬು, ಸಂತೋಷ್ ಕುಮಾರ್ ಜೈನ್, ಪ್ರಮುಖರಾದ ಸುನೀಶ್ ಕುಮಾರ್, ಆನಂದ ಶೆಟ್ಟಿ ವಾತ್ಸಲ್ಯ, ಸಂತೋಷ್ ಕುಮಾರ್ ಜೈನ್ ಪಡಂಗಡಿ, ರಾಜೇಶ್ ಶೆಟ್ಟಿ, ವಸಂತ ಗೌಡ ವರಕಬೆ, ರಾಜಪ್ಪ ಶೆಟ್ಟಿ ಸುಧೆಕ್ಕಾರ್, ಸೀತಾರಾಮ ಶೆಟ್ಟಿ ವೈಭವ್, ಆನಂದ ಕೋಟ್ಯಾನ್, ವಿತೇಶ್ ಜೈನ್, ಆಶಾಲತಾ, ಸುಭಾಷ್ ಚಂದ್ರ ಜೈನ್ ಶ್ರೀ ಸ್ವಸ್ತಿಕ್, ಸಾಯಿ ಕುಮಾರ್ ಶೆಟ್ಟಿ ನವಶಕ್ತಿ, ಶಶಿರಾಜ್ ಶೆಟ್ಟಿ, ಗೋಪಾಲ ಶೆಟ್ಟಿ ಕೊರ್ಯಾರು, ಪುಷ್ಪರಾಜ ಶೆಟ್ಟಿ, ರಾಮಚಂದ್ರ ಶೆಟ್ಟಿ, ಸಹ ಸಂಚಾಲಕರಾದ ಸುಧಾಮಣಿ, ಪ್ರಿಯಾ ಹೆಗ್ಡೆ, ಮಂಗಳಾ, ಪ್ರಜ್ವಲ್ ಶೆಟ್ಟಿ ಪಾಡ್ಯಾರು, ನಾರಾಯಣ ಪೂಜಾರಿ, ರಾಜ್ ಪ್ರಕಾಶ್ ಶೆಟ್ಟಿ, ಅಜಿತ್ ಕೆ.ಶೆಟ್ಟಿ, ರಮಾನಂದ ಸಾಲ್ಯಾನ್, ಮಧುರಾಜ್, ವಿತೇಶ್ ಜೈನ್ ಪಡಂಗಡಿ, ರಮಾನಂದ ಸಾಲ್ಯಾನ್, ನಾರಾಯಣ ಆಚಾರ್ಯ ಬರಾಯ, ವಿತೇಶ್ ಬಂಗೇರ, ನಿತಿನ್ ಬಂಗೇರ ಬರಾಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.