ADVERTISEMENT

ವೇಣೂರು: ಸಾಮೂಹಿಕ ವೃತೋಪದೇಶ ಏ.18 ರಂದು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 13:27 IST
Last Updated 16 ಏಪ್ರಿಲ್ 2025, 13:27 IST

ಉಜಿರೆ: ವೇಣೂರಿನಲ್ಲಿ ಬಾಹುಬಲಿ ಯುವಜನ ಸಂಘ ಮತ್ತು ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಜಂಟಿ ಆಶ್ರಯದಲ್ಲಿ ಬಾಲಕ-ಬಾಲಕಿಯರಿಗೆ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಲಾಗಿದೆ. ಏ.18 ರಂದು ಬೆಳಿಗ್ಗೆ 9ಕ್ಕೆ ಮೂಡುಬಿದಿರೆ ಜೈನಮಠದ  ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವೃತೋಪದೇಶ ನೀಡುವರು ಎಂದು ತೀರ್ಥಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ ತಿಳಿಸಿದ್ದಾರೆ.

ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷ ಅನಿತಾ ಸುರೇಂದ್ರಕುಮಾರ್ ಅಧ್ಯಕ್ಷತೆಯಲ್ಲಿ ಶಿಬಿರದ ಸಮಾರೋಪ ನಡೆಯಲಿದೆ. ಜೈನ್‌ಮಿಲನ್‌ನ ಮಂಗಳೂರು ವಲಯ ನಿರ್ದೇಶಕ ಸುದರ್ಶನ ಜೈನ್ ಭಾಗವಹಿಸುವರು.

ಏ.19ರಂದು ವಿದ್ಯುತ್ ನಿಲುಗಡೆ
ಉಜಿರೆ: ಕಕ್ಕಿಂಜೆ ಹಾಗೂ ಪಿಲಿಕ್ಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಪ್ರಯುಕ್ತ ಏ.19ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯತ್ ನಿಲುಗಡೆಯಾಗಲಿದೆ ಎಂದು ಉಜಿರೆ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.  ನೆರಿಯ, ಚಾರ್ಮಾಡಿ, ಕಲ್ಮಂಜ, ದಿಡುಪೆ, ಕಡಿರುದ್ಯಾವರ ಮಿತ್ತಬಾಗಿಲು, ಕೊಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.